ಬೆಂಗಳೂರು, [ಡಿ.10] ಚೆಕ್ ಬೌನ್ಸ್ ಪ್ರಕರಣದಲ್ಲಿ ನಟ ದ್ವಾರಕೀಶ್ ಸಂಕಷ್ಟ ಎದುರಾಗಿದೆ.

52 ಲಕ್ಷದ 20 ಸಾವಿರ ರೂಪಾಯಿ ನೀಡಿ, ಹಣ ನೀಡಲು ವಿಫಲವಾದಲ್ಲಿ 1 ವರ್ಷ ಜೈಲು ವಾಸ ಎಂದು 25ನೇ ಎಸಿಎಂಎಂ ಕೋರ್ಟ್ ಆದೇಶ ಹೊಡರಡಿಸಿದೆ.

ಚಾರುಲತಾ ಸಿನಿಮಾ ನಿರ್ಮಾಣಕ್ಕಾಗಿ ನಿರ್ಮಾಪಕ  ಕೆ.ಸಿ.ಎನ್. ಚಂದ್ರಶೇಖರ್ ಎನ್ನುವರಿಂದ ದ್ವಾರಕೀಶ್ 50 ಲಕ್ಷ ಸಾಲ ಪಡೆದಿದ್ದರು. ಬಳಿಕ ದ್ವಾರಕೀಶ್ ಅವರು ಚಂದ್ರಶೇಖರ್ ಗೆ ಮರಳಿ 52 ಲಕ್ಷ ರೂಪಾಯಿ ಆಂಧ್ರ ಬ್ಯಾಂಕ್ ನ ಚೆಕ್ ನೀಡಿದ್ದರು.

ಆದ್ರೆ ದ್ವಾರಕೀಶ್ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಇದ್ರಿಂದ 5 ವರ್ಷಗಳ ಹಿಂದೆ ನಿರ್ಮಾಪಕ  ಚಂದ್ರಶೇಖರ್ ಕೋರ್ಟ್ ಮೆಟ್ಟಿಲೇರಿದ್ದರು.

ಇಂದು [ಸೋಮವಾರ] ಈ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು 25ನೇ ಎಸಿಎಂಎಂ ನ್ಯಾಯಾಲಯವು, ಸಾಲವಾಗಿ ಪಡೆದಿದ್ದ ಹಣವನ್ನು ನೀಡುವಂತೆ ದ್ವಾರಕೀಶ್ ಗೆ ತಾಕೀತು ಮಾಡಿದೆ.

ಪಡೆದಿರುವ 52 ಲಕ್ಷದ 20 ಸಾವಿರ ರೂಪಾಯಿ ನೀಡಲು ಆಗದಿದ್ದಲ್ಲಿ ಒಂದು ವರ್ಷ ಜೈಲು ಎಂದು ಹೇಳಿ ಆದೇಶ ನೀಡಿದೆ. ಇದ್ರಿಂದ ದ್ವಾರಕೀಶ್ ಬೇರೆ ದಾರಿ ಇಲ್ಲದೆ ಪಡೆದ ಹಣ ಮರುಪಾವತಿ ಮಾಡಲೇಬೇಕಾಗಿದೆ.