ಬೆಂಗಳೂರು[ಜೂ.13]: ನಟ ದರ್ಶನ್ ಹೆಸರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಫೇಸ್'ಬುಕ್'ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದಕ್ಕೆ ಸ್ವತಃ ದರ್ಶನ್ ಸ್ಪಷ್ಟೀಕರಣ ನೀಡಿದ್ದಾರೆ. 

ತಮ್ಮ ಪೇಸ್'ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು ' ಇತ್ತೀಚಿಗೆ ತಿಳಿದು ಬಂದಿರುವಂತೆ ನನ್ನ ಹೆಸರಲ್ಲಿ ಕೆಲವು ಕಿಡಿಗೇಡಿಗಳ ಅನೇಕ ನಕಲಿ ಫೇಸ್ ಬುಕ್ ಖಾತೆಗಳಿವೆ. ಈ ಖಾತೆಗಳಿಂದ ಕೆಲವು ವ್ಯಕ್ತಿಗಳ ಮೇಲೆ ಅವಹೇಳನಕಾರಿ ಹೇಳಿಕೆಗಳು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ.

ಸೈಬರ್ ಕ್ರೈಂ ಡಿಪಾರ್ಟ್ಮೆಂಟ್ ಈ ರೀತಿ ಸೋಶಿಯಲ್ ಮೀಡಿಯಾ ದುರ್ಬಳಕೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈ ಕೊಳ್ಳುವುದಾಗಿ ಹೇಳಿದ್ದಾರೆ. ದಯಮಾಡಿ ಯಾರೂ ಇಂತಹ ಕೆಲಸಗಳಲ್ಲಿ ತೊಡಗಬೇಡಿ ಎಂದು ಕಳಕಳಿಯ ವಿನಂತಿ ಸಿದ್ದಾರೆ.

ಕಪ್ಪು ಎಂದು ಅಣಕ
ಈ ಸಲ ಕಪ್ ನಮ್ದೇ ಅಂತ ಅಂತಿದ್ದವ್ರು  ಹೇಳುತ್ತಿದ್ದವ್ರು ಆ ಕಪ್ಪು ಇದೇ ಅಂತ ಹೇಳೋಕೇನಾಗಿತ್ತೋ  ಎಂದು ಸಿಎಂ ಕುಮಾರಸ್ವಾಮಿ ಅವರ ಕಪ್ಪು ಬಣ್ಣದ ಚಿತ್ರ ಪೋಸ್ಟ್ ಹಾಕಿ ಅಣಕಿಸಿದ್ದರು.

ಈ ಪೋಸ್ಟ್ ವಿರುದ್ಧ ಅಖಿಲ ಕರ್ನಾಟಕ ಹೆಚ್ಡಿಕೆ ಅಭಿಮಾನಿಗಳ ಸೇವಾ ಸಂಘ ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್  ಅವರಿಗೆ ದೂರು ನೀಡಿತ್ತು. ಪ್ರಕರಣ ದಾಖಲಿಸಿರುವ ಪೊಲೀಸರು ಸೈಬರ್ ಪೊಲೀಸರ ನೆರವಿನಿಂದ ತನಿಖೆ ಆರಂಭಿಸಿದೆ.