ಬೆಂಗಳೂರು, [ನ.01]: #MeToo ರಂಪಾಟದಲ್ಲಿ ಒದ್ದಾಡುತ್ತಿರುವ ನಟ ಅರ್ಜುನ್​ ಸರ್ಜಾ ನಟಿ ಶ್ರುತಿ ಹರಿಹರನ್​ ಹಿರಿಯ ನಟರೊಬ್ಬರು ಕಿವಿಮಾತು ಹೇಳಿದ್ದಾರೆ.

#MeToo ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಚರಣ್​ ರಾಜ್​, ನಾನು ಎಲ್ಲಾ ಚಿತ್ರರಂಗದಲ್ಲಿಯೂ ಅರ್ಜುನ್‌ ಸರ್ಜಾ ಜೊತೆ‌ ಕೆಲಸ ಮಾಡಿದ್ದು, ಅವರು ತುಂಬಾ ಒಳ್ಳೆಯವರು  ಶ್ರುತಿ ಕೂಡ ಒಳ್ಳೆಯವರೇ. 

ರಿಹರ್ಸಲ್​ ಮಾಡುವಾಗ ಏನೋ ಟಚ್​ ಆಗಿರಬಹುದು. ಅದೇನೇ ಇದ್ದರೂ ಮುಂದುವರೆಸದೇ, ಆದಷ್ಟು ಬೇಗ ಸರಿ ಮಾಡಿಕೊಳ್ಳಿ ಅಂತಾ ಇಬ್ಬರಿಗೂ ಕಿವಿಮಾತು ಹೇಳಿದರು. 

#MeToo ವಿಚಾರಣೆ ವೇಳೆ ವಿಸ್ಮಯ ನಿರ್ಮಾಪಕನಿಂದ ಹೊಸ ಬಾಂಬ್!

ಇಂತಹ ಬೆಳವಣಿಗೆ ಚಿತ್ರರಂಗಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಸಿನಿಮಾ‌ ಮಾಡೋದಕ್ಕೆ ಅಸಹ್ಯ ಆಗುತ್ತಿದೆ. ಆದಷ್ಟು ಬೇಗ ಅವರವರೇ ಮಾತನಾಡಿಕೊಂಡು ಬಗೆಹರಿಸಿಕೊಂಡ್ರೆ ಒಳ್ಳೆಯದು ಎಂದು ತಿಳಿ ಹೇಳಿದ್ದಾರೆ.