ಬೆಂಗಳೂರು: ನಟಿ ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರು,  ಬುಧವಾರ ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್ ಹೇಳಿಕೆಯನ್ನು ದಾಖಲಿಸಿದ್ದಾರೆ.

ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಹಾಜರಾದ ವಿಸ್ಮಯ ಚಿತ್ರದ ನಿರ್ಮಾಪಕ ಉಮೇಶ್, ಶೃತಿ ಹರಿಹರನ್ ನಟ ಅರ್ಜುನ್ ಸರ್ಜಾ ವಿರುದ್ಧ ಮಾಡಿರುವ ಆರೋಪಗಳನ್ನು ಅಲ್ಲಗಳೆದಿದ್ದಾರೆ. 

ಉಮೇಶ್ ಪೊಲೀಸರ ಮುಂದೇ ಹೇಳಿದ್ದೇನು..? 

ಶೃತಿ ಶೂಟಿಂಗ್ ಸೆಟ್ ಗೆ ಬಂದದ್ದು ಕೇವಲ 9 ದಿನ ಮಾತ್ರ...ಶೃತಿಗೆ 3 ಲಕ್ಷ ರೂಪಾಯಿ ಪೇಮೆಂಟ್ ಕೊಟ್ಟಿದ್ದೆವು. ಶೃತಿ ಆರೋಪಿದ ಹಾಗೆ ಯಾವುದೇ ಘಟನೆ ಶೂಟಿಂಗ್ ಸೆಟ್‌ನಲ್ಲಿ ನಡೆದಿಲ್ಲ. ಚಿತ್ರದ ಶೂಟಿಂಗ್ ಸೆಟ್ನಲ್ಲಿ ಸುಮಾರು 40 ಜನ ಇರ್ತೆವೆ, ಅಲ್ಲಿ ಆ ರೀತಿ ನಡೆಯಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಏನೋ ಹೇಳಲು ಹೋದ ಶೃತಿ ಅದಕ್ಕೇ ಸ್ಟಿಕ್ ಆನ್ ಆಗಿದ್ದಾರೆ.  ವೈಯಕ್ತಿಕ ಪ್ರತಿಷ್ಠೆಗೆ ಬಿದ್ದು ಆರೋಪ ಮಾಡಿದಂತೆ ಕಾಣುತ್ತಿದೆ, ಎಂದು ಹೇಳಿದ್ದಾರೆ.

"

ವಿಸ್ಮಯ ಚಿತ್ರದ ವಿಲನ್ ರೋಲ್ ಗೆ ಚೇತನ್ ಆಯ್ಕೆ ಮಾಡಲಾಗಿತ್ತು, ನಂತರ ಜೆ.ಕೆ ಸಾಕಷ್ಟು ಪಾಪುಲರ್ ಆಗಿದ್ದು ಚೇತನ್ ಕೈಬಿಡಲಾಗಿತ್ತು. ಇನ್ನು ಪ್ರೇಮಬರಹ ಚಿತ್ರಕ್ಕೂ ಚೇತನ್ ಹೆಸರು ಕೈಬಿಟ್ಟಿರುವುಸರಿಂದ ಚೇತನ್ ಶೃತಿಗೆ ಸಪೋರ್ಟ್ ಮಾಡಿದ್ದಾರೆ, ಎಂದು ಉಮೇಶ್ ಪೊಲೀಸರ ಮುಂದೆ ತಿಳಿಸಿದ್ದಾರೆ.

ಪ್ರಕರಣ ಸಂಬಂಧಿಸಿದಂತೆ ಮಂಗಳವಾರ ವಿಸ್ಮಯ ಚಿತ್ರತಂಡದ ಕಿರಣ್ ಮತ್ತು ಮೋನಿಕಾ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು. ಇಂದು ವಿಸ್ಮಯ ಚಿತ್ರ ನಿರ್ದೇಶಕ ಆರುಣ್ ವೈದ್ಯನಾಥನ್, ಶೃತಿ ಸಹಾಯಕ ಬೋರೇಗೌಡ, ಶೃತಿ ಗೆಳತಿ ಯಶಸ್ವಿನಿ ಹೇಳಿಕೆಯನ್ನು ಪೊಲೀಸರು  ದಾಖಲಿಸಿದ್ದಾರೆ.

ವಿಸ್ಮಯ ಚಿತ್ರೀಕರಣದ ವೇಳೆ ನಟ ಅರ್ಜುನ್ ಸರ್ಜಾ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಶೃತಿ ಹರಿಹರನ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಆರೋಪಿಸಿದ್ದರು. ಬಳಿಕ, ಶೃತಿ ಆರೋಪವು ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ದಿನಕ್ಕೊಂದು ತಿರುವು ಪಡೆದ #MeToo ಆರೋಪವು ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.  ನಟ-ನಟಿಯರಿಬ್ಬರ ನಡುವೆ ಚಿತ್ರಮಂಡಳಿಯು ಸಂಧಾನಕ್ಕೆ ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.