ಮುಂಬೈ (ಜು. 30): ಕುವೈತ್ ನಲ್ಲಿ ಗುಲಾಮಗಿರಿಗೆ ಸಿಲುಕಿದ್ದ ಮಹಿಳೆಯನ್ನು ನಟ-ಸಂಸದ ಸನ್ನಿ ಡಿಯೋಲ್ ರಕ್ಷಿಸಿದ್ದಾರೆ. 

ಹಾಲಿವುಡ್ ಬ್ಲಾಕ್ ಬಸ್ಟರ್ ಚಿತ್ರಕ್ಕೆ ನೋ ಎಂದಿದ್ರು ಗೋವಿಂದ!

ಆಕರ್ಷಕ ಸಂಬಳದ ಕೆಲಸ ಕೊಡಿಸುತ್ತೇನೆ ಎಂದು  ನಂಬಿಸಿ ಏಜೆಂಟ್ ಒಬ್ಬರು ವೀಣಾ ಬೇಡಿ ಎಂಬ ಮಹಿಳೆಯನ್ನುಕುವೈತ್‌ನಲ್ಲಿರುವ ಪಾಕಿಸ್ತಾನದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು. ಘಟನೆ ಬಗ್ಗೆ ತಿಳಿದ ಸನ್ನಿ ಡಿಯೋಲ್ ವಿದೇಶಾಂಗ ಇಲಾಖೆಯನ್ನು ಸಂಪರ್ಕಿಸಿದ್ದಾರೆ. ಅವರ ಸಹಕಾರ ಹಾಗೂ ಕುವೈತ್ ನ ಎನ್ ಜಿಓ ವೊಂದರ ಸಹಾಯದಿಂದ ವೀಣಾರನ್ನು ಭಾರತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. 

ಮಾಜಿ ಪ್ರಧಾನಿ ವಾಜಪೇಯಿ ಅವರನ್ನು ತನ್ನ ತಂದೆ ಬೆಂಬಲಿಸಿದಂತೆ ತಾನೂ ಮೋದಿಯವರನ್ನು ಬೆಂಬಲಿಸುತ್ತೇನೆ ಎಂದು ಸನ್ನಿ ಡಿಯೋಲ್ ಬಿಜೆಪಿಗೆ ಸೇರಿದ್ದರು. ಪಂಜಾಬ್ ನ ಗುರುದಾಸ್ ಪುರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. 

ಗದರ್, ಏಕ್ ಪ್ರೇಮ್ ಕಥಾ, ದಾಮಿನಿ, ಗಯಲ್, ಬಾರ್ಡರ್ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.