ಜಮ್ಮು-ಕಾಶ್ಮೀರದ ಪ್ರಥಮ ಯುಪಿಎಸ್‌ಸಿ ಟಾಪರ್ ಮಾಡಿರುವ ಟ್ವೀಟ್ ಒಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಈ ಟ್ವೀಟ್‌ಗೆ ಸಂಬಂಧಿಸಿ ಅವರ ವಿರುದ್ಧ ಕೇಂದ್ರದ ನಿರ್ದೇಶನದ ಮೇರೆಗೆ ಜಮ್ಮು-ಕಾಶ್ಮೀರ ಸರ್ಕಾರದಿಂದ ನೋಟಿಸ್ ಜಾರಿಯಾಗಿದೆ.
ನವದೆಹಲಿ: ಜಮ್ಮು-ಕಾಶ್ಮೀರದ ಪ್ರಥಮ ಯುಪಿಎಸ್‌ಸಿ ಟಾಪರ್ ಶಾ ಫೈಸಲ್ ಮಾಡಿರುವ ಟ್ವೀಟ್ ಒಂದು ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ.
‘ದೇಶಭಕ್ತಿ + ಜನಸಂಖ್ಯೆ + ಅನಕ್ಷರತೆ+ ಅಲ್ಕೊಹಾಲ್ + ಅಶ್ಲೀಲಚಿತ್ರ + ತಂತ್ರಜ್ಞಾನ + ಸರ್ವಾಧಿಕಾರ=ರೇಪಿಸ್ತಾನ್!’ ಎಂದು ಫೈಸಲ್ ಏ.22ರಂದು ಟ್ವೀಟ್ ಮಾಡಿದ್ದರು.
ಈ ಟ್ವೀಟ್‌ಗೆ ಸಂಬಂಧಿಸಿ ಅವರ ವಿರುದ್ಧ ಕೇಂದ್ರದ ನಿರ್ದೇಶನದ ಮೇರೆಗೆ ಜಮ್ಮು-ಕಾಶ್ಮೀರ ಸರ್ಕಾರದಿಂದ ನೋಟಿಸ್ ಜಾರಿಯಾಗಿತ್ತು. ನೋಟಿಸ್ ಪ್ರತಿಯನ್ನು ಮಂಗಳವಾರ ಟ್ವೀಟ್ ಮಾಡಿರುವ ಫೈಸಲ್, ಸರ್ಕಾರದ ಕ್ರಮಕ್ಕೆ ಅಸಮಧಾನ ಹೊರಹಾಕಿದ್ದಾರೆ.
ಅಲ್ಲದೆ, ತಮ್ಮ ಟ್ವೀಟ್ ಭಾರತವನ್ನು ಕುರಿತಾಗಿರಲಿಲ್ಲ, ದಕ್ಷಿಣ ಏಷ್ಯಾದ ಅತ್ಯಾಚಾರ ಸಂಸ್ಕೃತಿಯ ಕುರಿತಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಫೈಸಲ್ ಟ್ವೀಟ್ ಈಗ ಭಾರಿ ಚರ್ಚೆಯನ್ನು ಹುಟ್ಟು ಹಾಕಿದೆ.
