ಭಯೋತ್ಪಾದನೆ ಹತ್ತಿಕ್ಕದ ಪಾಕ್ FATF ಕಪ್ಪು ಪಟ್ಟಿಗೆ ಸೇರ್ಪಡೆ?

ಭಯೋತ್ಪಾದನೆ ಹತ್ತಿಕ್ಕುವಲ್ಲಿ ಎಡವಿದ ಪಾಕಿಸ್ತಾನ| ಕ್ರಿಯಾ ಯೋಜನೆ ಸಲ್ಲಿಸಲು ಅಕ್ಟೋಬರ್ 2019 ಮೂರನೇ ಹಾಗೂ ಅಂತಿಮ ಗಡುವು| ಯೋಜನೆ ಸಲ್ಲಿಸದಿದ್ದರೆ ಪಾಕ್ ಕಪ್ಪು ಪಟ್ಟಿಗೆ ಸೇರ್ಪಡೆ

Act against terror by October or face blacklisting FATF warns Pakistan

ಫ್ಲೋರಿಡಾ[ಜೂ.22]: ನಿಟ್ಟಿನಲ್ಲಿ ಅಕ್ಟೋಬರ್ ಒಳಗಾಗಿ ಭಯೋತ್ಪದನಾ ಚಟುವಟಿಕೆಗಳನ್ನು ಹತ್ತಿಕ್ಕಲು ಹಾಗೂ ಉಗ್ರರಿಗೆ ಒದಗಿಸಲಾಗುತ್ತಿರುವ ಅಕ್ರಮ ಹಣ ವರ್ಗಾವಣೆ ಜಾಲ ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು FATF ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟಿದೆ.

ಫ್ಲೋರಿಡಾದ ಒರ್ಲಾಂಡೋದಲ್ಲಿ FATF ವಾರ್ಷಿಕ ಮಹಾಸಭೆ ನಡೆದಿದ್ದು, ಇಲ್ಲಿ ಪಾಕಿಸ್ತಾನ ಉಗ್ರರನ್ನು ಹತ್ತಿಕ್ಕುವಲ್ಲಿ ವಿಫಲವಾಗುತ್ತಿರುವ ವಿಚಾರ ಭಾರೀ ಚರ್ಚೆಯಾಗಿದೆ. ಈ ಹಿಂದೆ ಭಯೋತ್ಪಾದಕರನ್ನು ಹತ್ತಿಕ್ಕಲು ಕ್ರಿಯಾ ಯೋಜನೆ ಸಿದ್ಧಪಡಿಸಲು ಜನವರಿಯವರೆಗೆ ಸಮಯ ನೀಡಲಾಗಿತ್ತು. ಆದರೆ ಪಾಕ್ ಇದರಲ್ಲಿ ವಿಫಲವಾಗಿತ್ತು. ಬಳಿಕ ಈ ಗಡುವನ್ನು ಮೇ 2019ರವರೆಗೆ ವಿಸ್ತರಿಸಿದ್ದರು. ಆದರೆ ಎರಡನೇ ಬಾರಿಯೂ ಪಾಕಿಸ್ತಾನ ವಿಫಲವಾಗಿದೆ. 

ಇದೀಗ ಕ್ರಿಯಾ ಯೋಜನೆ ಸಿದ್ಧಪಡಿಸಲು FATF ಪಾಕಿಸ್ತಾನಕ್ಕೆ ಮೂರನೇ ಬಾರಿ ಹಾಗೂ ಅಂತಿಮ ಗಡುವು ನೀಡಿದ್ದು, 2019ರ ಅಕ್ಟೋಬರ್ ಒಳಗಾಗಿ ಸಲ್ಲಿಸುವಂತೆ ಖಡಕ್ ಸೂಚನೆ ನೀಡಿದೆ. ಅಲ್ಲದೇ ಕೊನೆಯ ಬಾರಿಯೂ ವಿಫಲವಾದರೆ ಬೇರೆ ದಾರಿ ಇಲ್ಲದೇ ಕಪ್ಪು ಪಟ್ಟಿಗೆ ಸೇರಿಸಲೇಬೇಕಾಗುತ್ತದೆ ಎಂದು ಎಚ್ಚರಿಸಿದೆ. 

ಕ್ಟೋಬರ್ ನಲ್ಲಿ ಮತ್ತೊಂದು ಮಹಾಸಭೆ ನಡೆಯಲಿದೆ. ಒಂದು ವೇಳೆ ಪಾಕಿಸ್ತಾನ ಈ ಸಭೆಯಲ್ಲಿ ಕ್ರಿಯಾ ಯೋಜನೆ ಸಲ್ಲಿಸಲು ವಿಫಲವಾದರೆ ಸದಸ್ಯ ರಾಷ್ಟ್ರಗಳು ನೀಡುವ ವೋಟಿಂಗ್ ನಿಂದ ಅದರ ಭವಿಷ್ಯ ನಿರ್ಧಾರವಾಗುತ್ತದೆ. ಈಗಾಗಲೇ ಬೂದು ಬಣ್ಣ ಪಟ್ಟಿಯಲ್ಲಿರುವ ಪಾಕಿಸ್ತಾನ ಉಗ್ರವಾಮಿ ಚಟುವಟಿಕೆಗಳನ್ನು ಹತ್ತಿಕ್ಕುವಲ್ಲಿ ಎಡವಿದರೆ, ತಕ್ಕ ಪಾಠ ಕಲಿಸಲು ಮತ್ತಷ್ಟು ಒತ್ತಡ ಹೇರುವುದಾಗಿ ಭಾರತದ ರಾಜತಾಂತ್ರಿಕ ಮೂಲಗಳು ತಿಳಿಸಿವೆ. 

ಭಯೋತ್ಪಾದನೆ ಹತ್ತಿಕ್ಕುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ 10 ಬೇಡಿಕೆಯುಳ್ಳ ಪಟ್ಟಿ ಸಲ್ಲಿಸಲಾಗಿತ್ತು, ಇವುಗಳನ್ನು ಶೀಘ್ರವೇ ಈಡೇರಿಸಲು ಈ ಮಹಾಸಭೆಯಲ್ಲಿ ಸೂಚಿಸಲಾಗಿದೆ. 

ಏನಿದು FATF(Financial Action Task Force)?

ಹಣಕಾಸು ಕ್ರಿಯಾ ಕಾರ್ಯಪಡೆ (FATF) ಉಗ್ರವಾದಿ ಚಟುವಟಿಕೆಗಳಿಗೆ ರಾಷ್ಟ್ರಗಳು ಅಕ್ರಮವಾಗಿ ರವಾನಿಸುವ ಜಾಲದ ಮೇಲೆ ಕಣ್ಣಿಟ್ಟಿರುತ್ತವೆ. 

ಕಪ್ಪುಪಟ್ಟಿಗೆ ಸೇರ್ಪಡೆಯಾಗುವ ರಾಷ್ಟ್ರಗಳು ಯಾವೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ?

ಎಚ್ಚರಿಕೆ ನಿಡಿದ ಬಳಿಕವೂ ಭಯೋತ್ಪಾದನಾ ಕೃತ್ಯಗಳಿಗೆ ವರ್ಗಾಯಿಸಲಾಗುವ ಹಣಕಾಸು ನೆರವನ್ನು ನಿಲ್ಲಿಸದ ರಾಷ್ಟರಗಳನ್ನು FATF ಕಪ್ಪುಪಟ್ಟಿಗೆ ಸೇರ್ಪಡೆ ಮಾಡುತ್ತದೆ. ಕಪ್ಪು ಪಟ್ಟಿಗೆ ಸೇರ್ಪಡೆಯಾಗುವ ರಾಷ್ಟಕ್ಕೆ ನೀಡಲಾಗುವ ಹಣಕಾಸು ನೆರವನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತದೆ. ಇದರಿಂದ ರಾಷ್ಟ್ರದ ವ್ಯವಹಾರ, ಶಿಕ್ಷಣ ಹಾಗೂ ಆರ್ಥಿಕ ವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ. ಇಂತಹ ಒತ್ತಡವೇರ್ಪಟ್ಟಾಗ ಕಪ್ಪುಪಟ್ಟಿಗೆ ಸೇರ್ಪಡೆಗೊಂಡ ರಾಷ್ಟ್ರ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಲೇಬೇಕಾಗುತ್ತದೆ.

 

Latest Videos
Follow Us:
Download App:
  • android
  • ios