61 ಎಪಿಪಿ ನೇಮಕ ಅಕ್ರಮ! ಉತ್ತರ ಪತ್ರಿಕೆ ತಿದ್ದಿದ್ದು, ನಕಲಿ ಸಹಿ ಮಾಡಿದ್ದು ತನಿಖೆಯಿಂದ ದೃಢ

news | Friday, March 16th, 2018
Suvarna Web Desk
Highlights

ಸಹಾಯಕ ಸರ್ಕಾರಿ ಅಭಿಯೋಜಕರ (ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ - ಎಪಿಪಿ) ನೇಮಕದಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 61 ಸರ್ಕಾರಿ ಅಭಿಯೋಜಕರಿಗೆ ಕಾನೂನು ಸಂಕಷ್ಟಎದುರಾಗಿದ್ದು, ಉದ್ಯೋಗಕ್ಕೆ ಕಂಟಕ ಬಂದಿದೆ.

ಬೆಂಗಳೂರು : ಸಹಾಯಕ ಸರ್ಕಾರಿ ಅಭಿಯೋಜಕರ (ಅಸಿಸ್ಟೆಂಟ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ - ಎಪಿಪಿ) ನೇಮಕದಲ್ಲಿ ನಡೆದಿರುವ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 61 ಸರ್ಕಾರಿ ಅಭಿಯೋಜಕರಿಗೆ ಕಾನೂನು ಸಂಕಷ್ಟಎದುರಾಗಿದ್ದು, ಉದ್ಯೋಗಕ್ಕೆ ಕಂಟಕ ಬಂದಿದೆ.

ಪ್ರಕರಣ ತನಿಖೆ ಪೂರ್ಣಗೊಳಿಸುವ ಲೋಕಾಯುಕ್ತ ಪೊಲೀಸರು ಗುರುವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಸಲ್ಲಿಸಿದ್ದಾರೆ.

ಕಳೆದ 2014ರಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ನೇಮಕಗೊಂಡು ಈಗಾಗಲೇ ರಾಜ್ಯದ ವಿವಿಧ ನ್ಯಾಯಾಲಯದಲ್ಲಿ 61 ಮಂದಿ ಕಾರ್ಯನಿರ್ವಹಿಸುತ್ತಿದ್ದು, ಕೆಲಸ ಕಳೆದು ಕೊಳ್ಳುವ ಭೀತಿ ಎದುರಾಗಿದೆ. ಸಾವಿರಾರು ಪುಟಗಳಷ್ಟಿರುವ ಆರೋಪಪಟ್ಟಿಯಲ್ಲಿ ಅಭ್ಯರ್ಥಿಗಳ ಉತ್ತರ ಪತ್ರಿಕೆ ಮೌಲ್ಯಮಾಪನ ಮಾಡಿದ 25 ಜಿಲ್ಲಾ ನ್ಯಾಯಾಧೀಶರು, ಪರೀಕ್ಷಾ ಕೇಂದ್ರಗಳ ಪರಿವೀಕ್ಷಕರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ವಿಜ್ಞಾನಿಗಳು ಸೇರಿದಂತೆ 90ಕ್ಕೂ ಹೆಚ್ಚು ಸಾಕ್ಷಿದಾರರ ಹೇಳಿಕೆ ಆರೋಪಪಟ್ಟಿಯಲ್ಲಿ ಉಲ್ಲೇಖವಾಗಿದೆ.

ಉತ್ತರ ಪತ್ರಿಕೆ ತಿದ್ದಿರುವುದು, ಮೌಲ್ಯಮಾಪನ ಮಾಡಿದ ನ್ಯಾಯಾಧೀಶರ ಸಹಿ ನಕಲು ಮಾಡಿರುವುದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲಿ ದೃಢಪಟ್ಟಿದೆ. ಮೌಲ್ಯಮಾಪಕರ ಸಹಿ ನಕಲಿಯಾಗಿದ್ದು, ಅಭ್ಯರ್ಥಿಗಳ ಸಹಿ ಮಾತ್ರ ನಕಲಿಯಾಗಿಲ್ಲ. ಹೀಗಾಗಿ ಅಕ್ರಮದಲ್ಲಿ ಅಭ್ಯರ್ಥಿಗಳ ಪಾತ್ರ ಇರುವ ಬಗ್ಗೆಯೂ ಆರೋಪಪಟ್ಟಿಯಲ್ಲಿ ನಮೂದಿಸಲಾಗಿದೆ ಎಂದು ಮೂಲಗಳು ಹೇಳಿವೆ.

2014ರಲ್ಲಿ 197 ಎಪಿಪಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಪೈಕಿ 61 ಮಂದಿಯ ನೇಮಕಾತಿ ಆಗಿತ್ತು. ಇದರಲ್ಲಿ ಅಕ್ರಮ ನಡೆದಿದೆ ಎಂದು ವಕೀಲ ಎಚ್‌.ಟಿ.ರವಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ತನಿಖೆ ಕೈಗೊಂಡ ಪೊಲೀಸರು ಅಕ್ರಮದ ಪ್ರಮುಖ ಆರೋಪಿಗಳು ಎನ್ನಲಾದ ಆಯ್ಕೆ ಸಮಿತಿ ಸದಸ್ಯರಾಗಿದ್ದ ಚಂದ್ರಶೇಖರ್‌.ಜಿ.ಹಿರೇಮಠ ಮತ್ತು ಆಡಳಿತಾಧಿಕಾರಿಯಾಗಿದ್ದ ನಾರಾಯಣಸ್ವಾಮಿ ಅವರನ್ನು ಬಂಧಿಸಿ 2017ರ ಜೂನ್‌ ತಿಂಗಳಲ್ಲಿ ದೋಷಾರೋಪ ಪಟ್ಟಿಸಲ್ಲಿಕೆ ಮಾಡಿದ್ದರು. ಚಂದ್ರಶೇಖರ್‌ ಮತ್ತು ನಾರಾಯಣಸ್ವಾಮಿ ತಮಗೆ ಬೇಕಾದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನುತಿರುಚಿ ಅಂಕಪಟ್ಟಿನೀಡಿದ್ದರು. ಅಲ್ಲದೇ, ನೇಮಕಪಟ್ಟಿಯಲ್ಲಿ ಅವರ ಹೆಸರು ಇರುವಂತೆ ನೋಡಿಕೊಂಡಿದ್ದರು ಎಂದು ಹೇಳಲಾಗಿದೆ.

ಆರೋಪಿ ಪಟ್ಟಿಯಲ್ಲಿರುವ ಸಹಾಯಕ ಸರ್ಕಾರಿ ಅಭಿಯೋಜಕರು:

ಸಿ.ಜೆ.ಸುಬ್ರಮಣ್ಯ - ದೊಡ್ಡಬಳ್ಳಾಪುರ, ಶಿವನಂಜಪ್ಪ - ಶ್ರೀರಂಗಪಟ್ಟಣ, ಮಹಮ್ಮದ್‌ ಅಜ್ಮಲ್‌ ಪಾಷಾ - ಮಧುಗಿರಿ ಜೆಎಂಎಫ್‌ಸಿ ನ್ಯಾಯಾಲಯ, ಗೀತಾ ಸಿದ್ದರಾಮಪ್ಪ ಅಸೂಟಿ - ರಾಯಚೂರು, ತ್ರಿಶೂಲ ಸುಭಾಷ್‌ ಚಂದ್ರ ಜೈನ್‌ - ಕನಕಪುರ, ಕುಮುದಿನಿ - ಶಿಡ್ಲಘಟ್ಟ, ಮಾಯಣ್ಣಗೌಡ - ಭದ್ರಾವತಿ, ವೀರೇಂದ್ರ ಪಾಟೀಲ್‌ - ಚಿತ್ರದುರ್ಗ, ಎ.ಟಿ.ರೂಪಾ - ದೇವನಹಳ್ಳಿ, ಸುಮಂಗಲ ನಾಯಕ್‌ - ಕುಂದಾಪುರ, ರವೀಂದ್ರ- ಹುಬ್ಬಳ್ಳಿ, ಚೇತನ್‌ ತುಕಾರಂ - ಮಂಗಳೂರು, ಗುರುಸ್ವಾಮಿ- ಚಿಕ್ಕಬಳ್ಳಾಪುರ, ಸಾಹೇಬ್‌ ಗೌಡ ಪಾಟೀಲ್‌ - ಚಿತ್ತಾಪುರ, ವೆಂಕಟೇಶ್‌ - ಆನೇಕಲ್‌, ಎನ್‌.ಕುಮಾರ್‌ -ಚಳ್ಳಕೆರೆ, ಶೋಭಾ ತಮ್ಮಣ್ಣ - ಚಿಕ್ಕೋಡಿ, ರೇಖಾ - ಹುಣಸೂರು, ಜ್ಞಾನಮೂರ್ತಿ - ಚನ್ನರಾಯಪಟ್ಟಣ, ಎಂ.ಎಲ್‌.ಚಂದ್ರಾರೆಡ್ಡಿ-ಹೊಸಪೇಟೆ, ರೂಪಾ-ಮಾಲೂರು, ರಘು - ತುಮಕೂರು, ಯಶೋಧ - ಮಾಗಡಿ, ಸುನೀಲ್‌ ಪಾಟೀಲ - ಮೂಡಿಗೆರೆ, ಬಸಲಿಂಗಪ್ಪ ಬಾಲಗೊಂಡ-ಅಥಣಿ, ಶಿಲ್ಪಾಜೋಷಿ - ಬೆಳಗಾವಿ, ಹರೀಶ್‌- ಚನ್ನರಾಯಪಟ್ಟಣ, ಅನುರಾಧ- ಮಾಲೂರು, ನಾರಾಯಣ - ಹುಣಸೂರು, ಸುಕೇಶ್‌ - ಹೊಸಕೋಟೆ, ಸರೋಜಿನಿ ವೀರಪ್ಪ-ಬಾಗಲಕೋಟೆ, ಮಹಮ್ಮದ್‌ ಖಾಜಾ-ಬಂಗಾರಪೇಟೆ, ವಿಜಯಕುಮಾರ್‌ - ರಾಮನಗರ, ರವೀಂದ್ರ - ಮೈಸೂರು, ಶಿವಮ್ಮ - ತಿಪಟೂರು, ಮಮತಾ-ಅರಕಲಗೂಡು, ವೀರೇಂದ್ರ-ಶಿವಮೊಗ್ಗ, ಧನಪಾಲ ದೇವಪ್ಪ - ಬೆಳಗಾವಿ, ಪೂರ್ಣಿಮಾ-ಚಿಕ್ಕಮಗಳೂರು, ವಿನಾಯಕ ಎಸ್‌.ಪಾಟೀಲ್‌ - ಹುಬ್ಬಳ್ಳಿ, ಸಂಗನಗೌಡ ಪಿ.ನಾಯಕ್‌ - ಬಾದಾಮಿ, ಎಲ್‌.ರೂಪಾ-ಚನ್ನಪಟ್ಟಣ, ರಾಜಣ್ಣ-ಗುಂಡ್ಲುಪೇಟೆ, ರಾಖಿ - ಗುಬ್ಬಿ, ದಾದಾಪೀರ್‌ ಶಬ್ಬೀರ್‌ ಅಹ್ಮದ್‌-ಶಿಕಾರಿಪುರ, ಛಾಯಾದೇವಿ - ಕಲಬುರಗಿ, ಜ್ಞಾನೇಂದ್ರ- ನಾಗಮಂಗಲ, ವೇಣುಕುಮಾರ್‌ - ಚಿಂತಾಮಣಿ, ಶೇಖ್‌ ಅಹಮದ್‌ - ಕೊರಟಗೆರೆ, ವಿಜಯ್‌ಚಂದ್ರ ಪ್ರಭು - ಗಂಗಾವತಿ, ಭರತ್‌ ಭುಜಬಲಿ - ವಿಜಯಪುರ, ಶ್ರೀನಿವಾಸ - ಬಂಗಾರಪೇಟೆ, ಲಿಂಗೇಶ್ವರ್‌ - ಚಳ್ಳಕೆರೆ, ಮೋಹನ್‌ - ಮಧುಗಿರಿ, ನಾಗಭೂಷಣ್‌ - ದೊಡ್ಡಬಳ್ಳಾಪುರ, ವಿಜಯಲಕ್ಷ್ಮೇ ಆತರ್ಗ - ಬೀಳಗಿ, ಮೋಹನ್‌ -ಆನೇಕಲ್‌, ಬಿ.ನಾರಾಯಣಸ್ವಾಮಿ - ಕನಕಪುರ , ರಂಜಾನ ಸುರೇಶ್‌ ಪಾಟೀಲ್‌ - ಬೈಲಹೊಂಗಲ, ವಿಮಲಾ - ಬೆಂಗಳೂರು ಎಂಎಂಟಿಸಿ 4ನೇ ನ್ಯಾಯಾಲಯ, ಪುಷ್ಪಾವತಿ - ಬೆಂಗಳೂರು 6ನೇ ಸಂಚಾರಿ ನ್ಯಾಯಾಲಯ.

Comments 0
Add Comment

  Related Posts

  India Today Karnataka PrePoll Part 6

  video | Friday, April 13th, 2018

  India Today Karnataka PrePoll 2018 Part 7

  video | Friday, April 13th, 2018

  India Today Karnataka Prepoll 2018

  video | Friday, April 13th, 2018

  India Today Karnataka PrePoll Part 6

  video | Friday, April 13th, 2018
  Suvarna Web Desk