ನಲಪಾಡ್ ಕೇಸ್’ನಲ್ಲಿ ಎತ್ತಂಗಡಿಯಾಗಿದ್ದ ಎಸಿಪಿಗೆ ಮತ್ತೆ ಸಿಕ್ತು ಕಬ್ಬನ್’ಪಾರ್ಕ್ ಪೋಸ್ಟಿಂಗ್! ಹ್ಯಾರೀಸ್ ಒತ್ತಡಕ್ಕೆ ಮಣಿಯಿತಾ ಸರ್ಕಾರ?

First Published 12, Mar 2018, 11:52 AM IST
ACP Manjunath Reposting to Kabban Park Police Station
Highlights

ಹ್ಯಾರೀಸ್ ಪುತ್ರ ನಲಪಾಡ್  ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.  ನಲಪಾಡ್ ಪ್ರಕರಣದಲ್ಲಿ  ಕರ್ತವ್ಯ ನಿರ್ವಹಣೆ ಲೋಪದಡಿ ಎತ್ತಂಗಡಿಯಾಗಿದ್ದ ಎಸಿಪಿ ಮಂಜುನಾಥ್ ತಳವಾರ್’ಗೆ ಮತ್ತೆ ಕಬ್ಬನ್ ಪಾರ್ಕ್’ನಲ್ಲೇ ಮರುಪೋಸ್ಟಿಂಗ್ ಭಾಗ್ಯ ಸಿಕ್ಕಿದೆ.  

ಬೆಂಗಳೂರು (ಮಾ. 12): ಹ್ಯಾರೀಸ್ ಪುತ್ರ ನಲಪಾಡ್  ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.  ನಲಪಾಡ್ ಪ್ರಕರಣದಲ್ಲಿ  ಕರ್ತವ್ಯ ನಿರ್ವಹಣೆ ಲೋಪದಡಿ ಎತ್ತಂಗಡಿಯಾಗಿದ್ದ ಎಸಿಪಿ ಮಂಜುನಾಥ್ ತಳವಾರ್’ಗೆ ಮತ್ತೆ ಕಬ್ಬನ್ ಪಾರ್ಕ್’ನಲ್ಲೇ ಮರುಪೋಸ್ಟಿಂಗ್ ಭಾಗ್ಯ ಸಿಕ್ಕಿದೆ.  

ಕರ್ತವ್ಯ ಲೋಪದಡಿ ಇಬ್ಬರು ಅಧಿಕಾರಿಗಳಿಗೆ ಶಿಕ್ಷೆ ನೀಡಲಾಗಿತ್ತು.  ಠಾಣಾ ಇನ್ಸ್ಪೆಕ್ಟರ್ ವಿಜಯ ಹಡಗಲಿ ಅಮಾನತುಗೊಂಡಿದ್ದರು. ಎಸಿಪಿ ಮಂಜುನಾಥ್ ತಳವಾರ ಎತ್ತಂಗಡಿಯಾಗಿದ್ದರು.  ವಿದ್ವತ್ ಹಲ್ಲೆ ಪ್ರಕರಣದಲ್ಲಿ ನಲಪಾಡ್ ಮೇಲೆ ಎಫ್ಐಆರ್ ಹಾಕದಂತೆ ಎಸಿಪಿ ಮಂಜುನಾಥ್ ತಳವಾರ್ ಒತ್ತಡ ಹಾಕಿದ್ದರು. ಇದು ಸಾರ್ವಜನಿಕ ಆಕ್ರೋಶಕ್ಕೂ ಕಾರಣವಾಯಿತು.  ಆಕ್ರೋಶದ ಕಾವು ಹೆಚ್ಚಾದಾಗ ಗೃಹ ಸಚಿವರು ಮಂಜುನಾಥ್’ರನ್ನು ಎತ್ತಂಗಡಿ ಮಾಡಿದ್ದರು.

ಇದೀಗ  ಪ್ರಕರಣ ತಣ್ಣಗಾದ ಬಳಿಕ ಮತ್ತೆ ಅದೇ ಜಾಗಕ್ಕೆ ಎಸಿಪಿಗೆ ಪೋಸ್ಟಿಂಗ್ ಸಿಕ್ಕಿದೆ.   ಹ್ಯಾರೀಸ್ ಒತ್ತಡಕ್ಕೆ ಮಣಿಯಿತಾ ರಾಜ್ಯ ಸರ್ಕಾರ?  ಪ್ರಕರಣದಲ್ಲಿ ನ್ಯಾಯ ಸಿಗುತ್ತಾ ಹೀಗಾದರೆ..!? ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.  

loader