ರಾತ್ರಿ 11.30 ಕ್ಕೆ 'ಜೈ ಮಾಲಾ' ಶಾಸ್ತ್ರಕ್ಕಾಗಿ ಮದುಮಗಳು ತಯಾರಾಗಿ ತನ್ನ ಕೊಠಡಿಯಲ್ಲಿ ಕುಳಿತ್ತಿದ್ದಳು. ಈ ವೇಳೆ ಏಕಾಏಕಿ ಆಕೆಯ ಕೋಣೆಗೆ ದೌಡಾಯಿಸಿ ಬಂದ ಮಹಿಳೆಯೊಬ್ಬಳು ವಧುವಿನ ಮುಖಕ್ಕೆ ಆ್ಯಸಿಡ್ ಎರಚಿ ಬಾಗಿಲನ್ನು ಹೊಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾಳೆ. ವಧುವಿನ ಕಿರುಚಾಟ ಕೇಳಿ ಓಡಿ ಬಂದ ಸಂಬಂಧಿಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯಿಂದ ಧೃತಿಗೆಡದ ವರ ಮದುಮಗಳನ್ನು ಮನೆಗೆ ಕರೆತಂದು ಆಕೆಯೊಂದಿಗೆ ಸಕಲ ವಿಧಿ ವಿಧಾನಗಳೊಂದಿಗೆ ಮದುವೆಯಾಗಿದ್ದಾನೆ.
ರಾಯ್ ಬರೇ (ನ.28): ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ಮದುವೆಗೆಂದು ಸಿದ್ಧಳಾಗಿ ಕುಳಿತ್ತಿದ್ದ ವಧುವಿನ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ಬೆಳಕಿಗೆ ಬಂದಿದೆ.
ರಾತ್ರಿ 11.30 ಕ್ಕೆ 'ಜೈ ಮಾಲಾ' ಶಾಸ್ತ್ರಕ್ಕಾಗಿ ಮದುಮಗಳು ತಯಾರಾಗಿ ತನ್ನ ಕೊಠಡಿಯಲ್ಲಿ ಕುಳಿತ್ತಿದ್ದಳು. ಈ ವೇಳೆ ಏಕಾಏಕಿ ಆಕೆಯ ಕೋಣೆಗೆ ದೌಡಾಯಿಸಿ ಬಂದ ಮಹಿಳೆಯೊಬ್ಬಳು ವಧುವಿನ ಮುಖಕ್ಕೆ ಆ್ಯಸಿಡ್ ಎರಚಿ ಬಾಗಿಲನ್ನು ಹೊಗಿನಿಂದ ಲಾಕ್ ಮಾಡಿ ಪರಾರಿಯಾಗಿದ್ದಾಳೆ.
ವಧುವಿನ ಕಿರುಚಾಟ ಕೇಳಿ ಓಡಿ ಬಂದ ಸಂಬಂಧಿಕರು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯಿಂದ ಧೃತಿಗೆಡದ ವರ ಮದುಮಗಳನ್ನು ಮನೆಗೆ ಕರೆತಂದು ಆಕೆಯೊಂದಿಗೆ ಸಕಲ ವಿಧಿ ವಿಧಾನಗಳೊಂದಿಗೆ ಮದುವೆಯಾಗಿದ್ದಾನೆ.
ವಧುವಿನ ಮುಖ ಹಾಗೂ ಕಣ್ಣಿನ ಹೊಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ಮದುವೆ ವಿಧಿ ವಿಧಾನಗಳ ಬಳಿಕ ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ವಧುವಿಗೆ ಪರಿಚಯವಿದ್ದವರೇ ಈ ಕೃತ್ಯ ಎಸಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.
