ಆ್ಯಸಿಡ್ ದಾಳಿಗೆ ಒಳಗಾಗಿ ಮುಖ ಸಂಪೂರ್ಣವಾಗಿ ಸುಟ್ಟುಹೋಗಿ ವಿಕಾರವಾಗಿದ್ದ ರೇಷ್ಮಾ ಖುರೇಶಿ ಇಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ.

ನ್ಯೂಯಾರ್ಕ್ (ಸೆ.25): 2014 ಮೇ ತಿಂಗಳು ಮುಂಬೈನಿಂದ ಅಲಹಾಬಾದ್ ನಗರಕ್ಕೆ ಪ್ರಯಾಣ ಮಾಡುವಾಗ ತನ್ನ ತಂಗಿಯ ಪತಿ ಮತ್ತು ಮೂವರು ಪುರುಷರಿಂದ ಆ್ಯಸಿಡ್ ದಾಳಿಗೆ ಒಳಗಾಗಿ ಮುಖ ಸಂಪೂರ್ಣವಾಗಿ ಸುಟ್ಟುಹೋಗಿ ವಿಕಾರವಾಗಿದ್ದ ರೇಷ್ಮಾ ಖುರೇಶಿ ಇಂದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾಳೆ. ಆ್ಯಸಿಡ್ ದಾಳಿಯ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಎಲ್ಲರೂ ಊಹಿಸಿದ್ದರು ಆದರೆ ಆಕೆಗೆ ಮುಂಬೈನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಈಗ ಆಕೆಯ ಸುದ್ದಿ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ರೇಷ್ಮಾ ಖುರೇಶಿ ಆ್ಯಸಿಡ್ ದಾಳಿಗೆ ಒಳಗಾಗಿ ಸೌಂದರ್ಯ ಕಳೆದುಕೊಂಡು ವಿಕಾರವಾಗಿದ್ದಳು, ಅ್ಯಸಿಡ್ ದಾಳಿಯಲ್ಲಿ ಆಕೆಯ ಒಂದು ಕಣ್ಣು ಸಂಪೂರ್ಣ ಹೊರಟುಹೋಗಿತ್ತು. ಆದರೆ ಆಕೆ ಎದೆಗುಂದದೆ ಇತ್ತೀಚೆಗೆ ನ್ಯಾಯಾರ್ಕ್ ನಲ್ಲಿ ನಡೆದ ಪ್ಯಾಷನ್ ಶೋನಲ್ಲಿ ಭಾಗವಹಿಸಿದ್ದಾಳೆ. ಪ್ಯಾಷನ್ ಶೋನಲ್ಲಿ ಬಿಳಿಯ ಬಣ್ಣದ ನಿಲುವಂಗಿ ತೊಟ್ಟು ನೆಡೆದು ಬರುತ್ತಿದ್ದ ಆಕೆಯನ್ನು ನೋಡಿ ಜನ ಚಪ್ಪಳೆ ತಟ್ಟಿ ಪ್ರೋತ್ಸಾಹ ನೀಡಿದರು.

ಈಗ ರೇಷ್ಮಾ ಖುರೇಶಿ ತನ್ನಂತೆ ಆ್ಯಸಿಡ್ ದಾಳಿಗೆ ಒಳಗಾಗಿ ನೊಂದವರಿಗೆ ಸಾಂತ್ವಾನ ನೀಡುವ ಕೆಲಸ ಮಾಡುತ್ತಿದ್ದಾರೆ. ನಾನು ಪ್ರೀತಿಸುವುದು ಚರ್ಮವನ್ನಲ್ಲ ಎಂದು ಹೇಳುವ ಅವರು ಇಂತಹ ದಾಳಿಯ ಆಕ್ರಮಣದ ವಿರುದ್ಧ ಧ್ವನಿ ಎತ್ತುವ ಸಲುವಾಗಿ ಒಂದು ಲಾಭರಹಿತವಾದ ಸಂಸ್ಥೆಯೊಂದರಲ್ಲಿ ದುಡಿಯುತ್ತಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ವರಧಿ ಮಾಡಿದೆ.