ಚಿತ್ರಹಳ್ಳಿಯ ಚಿತ್ರಲಿಂಗೇಶ್ವರ ಅಂಬಿನೋತ್ಸವಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದ್ದು, ಎತ್ತಿನಗಾಡಿಯಲ್ಲಿದ್ದ ಮಲ್ಕಾಪುರ ಗ್ರಾಮದ ಪಾಲಯ್ಯ (28), ವಿಜಿಯಪ್ಪ (30) ಎಂಬುವವರು ಮೃತಪಟ್ಟಿದ್ದು, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಹೊಳಲ್ಕೆರೆ[ಅ.19]: ಎತ್ತಿನಗಾಡಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದ್ದು, ಇಬ್ಬರು ಧಾರುಣವಾಗಿ ಮೃತಪಟ್ಟಿರುವ ಘಟನೆ ಚಿತ್ರದುರ್ಗದ ಚಿತ್ರಹಳ್ಳಿಯಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಚಿತ್ರಹಳ್ಳಿಯ ಚಿತ್ರಲಿಂಗೇಶ್ವರ ಅಂಬಿನೋತ್ಸವಕ್ಕೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದ್ದು, ಎತ್ತಿನಗಾಡಿಯಲ್ಲಿದ್ದ ಮಲ್ಕಾಪುರ ಗ್ರಾಮದ ಪಾಲಯ್ಯ (28), ವಿಜಿಯಪ್ಪ (30) ಎಂಬುವವರು ಮೃತಪಟ್ಟಿದ್ದು, ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. 

ಮಧ್ಯರಾತ್ರಿ 1 ಗಂಟೆಗೆ ಈ ಅವಘಡ ನಡೆದಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಫತ್ರೆಗೆ ದಾಖಲಿಸಲಾಗಿದೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.