ಭೀಕರ ಅಪಘಾತ : ಒಂದೇ ಕುಟುಂಬದ 7 ಮಂದಿ ಸಾವು

news | Saturday, April 7th, 2018
Suvarna Web Desk
Highlights

ತಮಿಳುನಾಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಆನೇಕಲ್ : ತಮಿಳುನಾಡಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.

ಇಬ್ಬರು ಮಹಿಳೆಯರು ಸೇರಿ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿದ ವಿರುದು ನಗರ ಜಿಲ್ಲೆಯ ರಾಜಪಾಳ್ಯಂನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕೇರಳ ಪ್ರವಾಸ ಮುಗಿಸಿ ವಾಪಸಾಗುವ ವೇಳೆ ಲಾರಿಗೆ ಇನ್ನೋವಾ ಕಾರು ಡಿಕ್ಕಿಯಾದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಮೃತರನ್ನು ರತ್ನ, ಕಲಾವತಿ, ಶಂಕರಗೌಡ, ದಾರಾ, ಕೀರ್ತಿಕಾ, ಲಕ್ಷ್ಮೀನಾರಾಯಣ ಮತ್ತು ಮಹೇಶ ಎಂದು ಗುರುತಿಸಲಾಗಿದೆ.

Comments 0
Add Comment

    ಮಾನವೀಯ ಮರೆತ ಜನ :ಮಕ್ಕಳ ಕಳ್ಳನೆಂದು ಹಲ್ಲೆಗೀಡದ ವ್ಯಕ್ತಿ ಸಾವು

    news | Wednesday, May 23rd, 2018