ಜವರಾಯನ ಅಟ್ಟಹಾಸಕ್ಕೆ ಒಂದೇ ಕುಟುಂಬದ ಐವರು ಯಮನಪಾದ ಸೇರಿದ್ದಾರೆ. ಇಲ್ಲಿನ ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು ಗಂಡ, ಹೆಂಡತಿ, ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತಿ ಹುಸೇನಸಾಬ್, ಪತ್ನಿ ಮಾಲಾನಾ, ಮಕ್ಕಳಾದ ಸಾಬೀರಾ, ಗುಲಾಬಿ  ಹಾಗೂ 3 ವರ್ಷದ ಕಂದಮ್ಮ ಮೆಹಬೂಬ್​ ಮೃತಪಟ್ಟಿದ್ದಾರೆ.

ರಾಯಚೂರು(ಮೇ.20):  ಜವರಾಯನ ಅಟ್ಟಹಾಸಕ್ಕೆ ಒಂದೇ ಕುಟುಂಬದ ಐವರು ಯಮನಪಾದ ಸೇರಿದ್ದಾರೆ. ಇಲ್ಲಿನ ಸಿಂಧನೂರು ತಾಲೂಕಿನ ದಡೆಸುಗೂರು ಬಳಿ ಭೀಕರ ಅಪಘಾತ ಸಂಭವಿಸಿದ್ದು ಗಂಡ, ಹೆಂಡತಿ, ಮೂವರು ಮಕ್ಕಳು ಮೃತಪಟ್ಟಿದ್ದಾರೆ. ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪತಿ ಹುಸೇನಸಾಬ್, ಪತ್ನಿ ಮಾಲಾನಾ, ಮಕ್ಕಳಾದ ಸಾಬೀರಾ, ಗುಲಾಬಿ ಹಾಗೂ 3 ವರ್ಷದ ಕಂದಮ್ಮ ಮೆಹಬೂಬ್​ ಮೃತಪಟ್ಟಿದ್ದಾರೆ.

ಮೃತರು ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದವರಾಗಿದ್ದು, ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ ಇನ್ನಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿದೆ.