ಮದುವೆಗೆ ಕರೆಯಲು ಹೋದವರು ಮಸಣ ಸೇರಿದ್ದಾರೆ. ಮಧುಗಿರಿ ತಾಲೂಕಿನ ಪಡಸಾಲಹಟ್ಟಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಲಗ್ನ ಪತ್ರಿಕೆ ಹಂಚಲು ತೆರಳಿದ್ದ ತಾಯಿ ಮಗ ಸಾವನ್ನಪ್ಪಿದ್ದಾರೆ.
ತುಮಕೂರು (ಜ.03): ಮದುವೆಗೆ ಕರೆಯಲು ಹೋದವರು ಮಸಣ ಸೇರಿದ್ದಾರೆ. ಮಧುಗಿರಿ ತಾಲೂಕಿನ ಪಡಸಾಲಹಟ್ಟಿಯಲ್ಲಿ ಬೈಕ್ ಹಾಗೂ ಕಾರು ನಡುವೆ ಡಿಕ್ಕಿಯಾಗಿ ಲಗ್ನ ಪತ್ರಿಕೆ ಹಂಚಲು ತೆರಳಿದ್ದ ತಾಯಿ ಮಗ ಸಾವನ್ನಪ್ಪಿದ್ದಾರೆ.
ಮಧುಗಿರಿ ತಾಲೂಕಿನ ಮಾಡಗಾನಹಟ್ಟಿ ಗ್ರಾಮದ ಕಂಬಕ್ಕ(48) ಹಾಗೂ ಮಂಜುನಾಥ(26) ಮೃತಪಟ್ಟ ದುರ್ದೈವಿಗಳು.
ವಿವಾಹದ ಅಹ್ವಾನ ಪತ್ರಿಕೆ ಹಂಚಿ ದ್ವಿ ಚಕ್ರವಾಹನದಲ್ಲಿ ಹಿಂದಿರುಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಿಡಿಗೇಶಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
