ಕೇರಳಕ್ಕೆ ಯುಎಇ ರಾಶಿ ರಾಶಿ ಹಣ: ಬೇಕಾ, ಬೇಡ್ವಾ ನೀನೆ ಹೇಳಣ್ಣ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 22, Aug 2018, 7:27 PM IST
Accepting UAE Cash Offer For Kerala Is A Problem
Highlights

ಕೇರಳಕ್ಕೆ ಯುಎಇ ಸಹಾಯ ವೇಸ್ಟ್ ಆಗುತ್ತಾ?! ಕೇರಳ ಪ್ರವಾಹಕ್ಕೆ ಯುಎಇ 100 ಮಿಲಿಯನ್ ಧನಸಹಾಯ! ವಿದೇಶದಿಂದ ಹಣ ಸ್ವೀಕರಿಸುವುದಕ್ಕೆ ಕಾನೂನಿನ ಅಡ್ಡಿ! ಹಣ ವರ್ಗಾವಣೆ ಕುರಿತು ದ್ವಿಪಕ್ಷೀಯ ಒಪ್ಪಂದವಾಗಿಲ್ಲ  

ಹೈದರಾಬಾದ್(ಆ.22): ಕೇರಳ ಪ್ರವಾಹ ಕಂಡು ಮಮ್ಮಲ ಮರುಗಿದ ಮಧ್ಯಪ್ರಾಚ್ಯ ರಾಷ್ಟ್ರಗಳು, ಕೇರಳ ಪುನರ್ ಸ್ಥಾಪನೆಗೆ ಹೇರಳ ಧನ ಸಹಾಯ ಮಾಡಿವೆ. ಅದರಲ್ಲೂ ಸಂಯುಕ್ತ ಅರಬ್ ರಾಷ್ಟ್ರವೊಂದೇ ಕೇರಳಕ್ಕೆ ಸುಮಾರು 100 ಮಿಲಿಯನ್ ಯುಎಸ್ ಡಾಲರ್ ಧನ ಸಹಾಯದ ಘೋಷಣೆ ಮಾಡಿದೆ.

ಆದರೆ ಕೇರಳಕ್ಕೆ ಈ ಧನ ಸಹಾಯ ಸ್ವೀಕರಿಸುವುದೇ ಅತ್ಯಂತ ಕಠಿಣ ಸವಾಲಾಗಿ ಪರಿಣಮಿಸಿದೆ. ಕಾರಣ ಉಭಯ ರಾಷ್ಟ್ರಗಳ ನಡುವೆ ಹಣ ವರ್ಗಾವಣೆಯ ಕುರಿತು ಯಾವುದೇ ದ್ವಿಪಕ್ಷೀಯ ಒಪ್ಪಂದ ಆಗದೇ ಇರುವುದು. ಈ ಹಿಂದೆ ಪ್ರಕೃತಿ ವಿಕೋಪ ಸಂಭವಿಸಿದಾಗ ಯುಎಇಯಲ್ಲಿ ವಾಸಿಸುವ ಭಾರತೀಯರು ಆರ್ ಬಿಐ ಡ್ರಾಫ್ಟ್ ಗೆ ಹಣ ಸಂದಾಯ ಮಾಡುತ್ತಿದ್ದರೇ ವಿನಾ: ನೇರವಾಗಿ ಯುಎಇ ಸರ್ಕಾರ ಭಾರತ ಸರ್ಕಾರಕ್ಕೆ  ಹಣ ಸಂದಾಯ ಮಾಡಿದ ಉದಾಹರಣೆ ಇಲ್ಲ.

ಈ ಕುರಿತು ಮಾಹಿತಿ ನೀಡಿರುವ ಸೌದಿ ಅರೆಬಿಯಾಕ್ಕೆ ಭಾರತದ ಮಾಜಿ ರಾಯಭಾರಿ ತಲ್ಮೀಜ್ ಅಹ್ಮದ್, ಯುಎಇ ಘೋಷಿಸಿರುವ ಧನಸಹಾಯ ಭಾರತಕ್ಕೆ ಬರುವುದು ಅನುಮಾನ ಎಂದು ಹೇಳಿದ್ದಾರೆ. ಒಂದು ದೇಶದಲ್ಲಿ ಪ್ರಕೃತಿ ವಿಕೋಪ ಉಂಟಾದಾಗ ಮತ್ತೊಂದು ದೇಶ ಪರಿಹಾರ ಸಾಮಗ್ರಿ ಕಳುಹಿಸಬಹುದೇ ವಿನಾ: ಬನೇರವಾಗಿ ಹಣ ಕಲಳುಹಿಸಿದ ಉದಾಹರಣೆ ಇಲ್ಲ ಎಂದು ಅಹ್ಮದ್ ತಿಳಿಸಿದ್ದಾರೆ.

ಅಲ್ಲದೇ ಭಾರತದ ಕಾನೂನು ಪ್ರಕಾರ ಯಾವುದೇ ದೇಶದಿಂದ ನೇರವಾಗಿ ಹಣ ಸ್ವೀಕರಿಸುವಂತಿಲ್ಲ. ಈ ಕಾರಣಕ್ಕೆ ಯುಎಇ ಧನಸಹಾಯ ಕೇರಳ ಪ್ರವಾಹಕ್ಕೆ ಬಳಕೆಯಾಗುವುದು ಅನುಮಾನ ಎನ್ನಲಾಗಿದೆ. ಅಲ್ಲದೇ ಯುಎಇ ಧನಸಹಾಯದ ಬದಲು ಅಷ್ಟೇ ಪ್ರಮಾಣದ ಪರಿಹಾರ ಸಾಮಗ್ರಿ ಕಳುಹಿಸಿದರೆ ಒಳ್ಳೆಯದು ಎನ್ನುತ್ತಾರೆ ಅಹ್ಮದ್.  

loader