ಸರ್ಕಾರಿ ಅಧಿಕಾರಿ ಜಯಚಂದ್ರ ಅವ್ಯವಹಾರ ಪ್ರಕರಣದಲ್ಲಿ ಪೋಲಿಸರಿಗೆ ಸಂಕಷ್ಟ ಇನ್ನೂ ತಪ್ಪಿಲ್ಲ. ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು ನಡೆಸುತ್ತಿದೆ.
ಬೆಂಗಳೂರು (ಡಿ. 22): ಸರ್ಕಾರಿ ಅಧಿಕಾರಿ ಜಯಚಂದ್ರ ಅವ್ಯವಹಾರ ಪ್ರಕರಣದಲ್ಲಿ ಪೋಲಿಸರಿಗೆ ಸಂಕಷ್ಟ ಇನ್ನೂ ತಪ್ಪಿಲ್ಲ. ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು ನಡೆಸುತ್ತಿದೆ.
ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆಯಲು ಎಸಿಬಿ ಅಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ. ಎಸಿಬಿ ಪ್ರಕರಣ ವಿಚಾರಣೆ ಮಾಡುವ ಸಲುವಾಗಿ ಇಂದು ಬಾಡಿವಾರೆಂಟ್ ಗೆ ಮನವಿ ಸಲ್ಲಿಸಿದೆ.
ಜಾರಿ ನಿರ್ದೇಶನಾಲಯದ ವಾದ ಬಳಿಕ ಬಾಡಿವಾರೆಂಟ್ ಮೇಲೆ ಸಿಬಿಐ ವಶಕ್ಕೆ ಪಡೆದಿತ್ತು. ಐದು ದಿನಗಳ ಕಾಲ ಸಿಬಿಐ ವಶದಲ್ಲಿದ್ದ ಜಯಚಂದ್ರ ನಿನ್ನೆಯಷ್ಟೇ ಜೈಲು ಸೇರಿದ್ದ.
ಇಂದು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಅದಕ್ಕೂ ಮೊದಲೇ ಬಾಡಿವಾರೆಂಟ್ ಮೇಲೆ ಜಯಚಂದ್ರ ವಶಕ್ಕೆ ಪಡೆಯಲು ಎಸಿಬಿ ಕಸರತ್ತು ನಡೆಸುತ್ತಿದೆ.
