Asianet Suvarna News Asianet Suvarna News

ಎಸಿಬಿ ದಾಳಿಗೆ ಒಳಗಾಗಿದ್ದ ಗೌಡಯ್ಯ, ಸ್ವಾಮಿ ಸಸ್ಪೆಂಡ್‌

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ದಾಳಿ ವೇಳೆ ಟಿ.ಆರ್‌.ಸ್ವಾಮಿ ಮತ್ತು ಎನ್‌.ಜಿ.ಗೌಡಯ್ಯ ನಿವಾಸದಲ್ಲಿ ಕೋಟ್ಯಂತರ ರು. ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಯಿತು. ಅಧಿಕಾರಿಗಳ ಆಸ್ತಿ ಮೌಲ್ಯವನ್ನು ಕಂಡ ಎಸಿಬಿ ಅಧಿಕಾರಿಗಳೇ ದಂಗಾಗಿದ್ದರು. ಇಬ್ಬರು ಅಧಿಕಾರಿಗಳ ಆಸ್ತಿ ಮೌಲ್ಯ ಪರಿಶೀಲನೆ ಸಮಯದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಇದರ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ಸ್ವಾಮಿ ಮತ್ತು ಗೌಡಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು.

ACB raids Case Swamy and Gowdaiah suspended
Author
Bengaluru, First Published Oct 11, 2018, 9:30 AM IST

ಬೆಂಗಳೂರು(ಅ.11): ಕೋಟ್ಯಂತರ ರು. ಅಕ್ರಮ ಸಂಪತ್ತು ಹೊಂದಿದ್ದ ಆರೋಪದ ಹಿನ್ನೆಲೆಯಲ್ಲಿ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್‌.ಸ್ವಾಮಿ ಹಾಗೂ ಬಿಡಿಎ ಎಂಜಿನಿಯರ್‌ ಎನ್‌.ಜಿ.ಗೌಡಯ್ಯ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ.

ಇದನ್ನು ಓದಿ: ಇವರು ಅಧಿಕಾರಿಗಳೋ..ಕುಬೇರರ ಮಕ್ಕಳೋ..?

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ದಾಳಿ ವೇಳೆ ಟಿ.ಆರ್‌.ಸ್ವಾಮಿ ಮತ್ತು ಎನ್‌.ಜಿ.ಗೌಡಯ್ಯ ನಿವಾಸದಲ್ಲಿ ಕೋಟ್ಯಂತರ ರು. ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಯಿತು. ಅಧಿಕಾರಿಗಳ ಆಸ್ತಿ ಮೌಲ್ಯವನ್ನು ಕಂಡ ಎಸಿಬಿ ಅಧಿಕಾರಿಗಳೇ ದಂಗಾಗಿದ್ದರು. ಇಬ್ಬರು ಅಧಿಕಾರಿಗಳ ಆಸ್ತಿ ಮೌಲ್ಯ ಪರಿಶೀಲನೆ ಸಮಯದಲ್ಲಿ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿತ್ತು. ಇದರ ಆಧಾರದ ಮೇಲೆ ಎಸಿಬಿ ಅಧಿಕಾರಿಗಳು ಭ್ರಷ್ಟಾಚಾರದ ಆರೋಪಕ್ಕೊಳಗಾಗಿರುವ ಸ್ವಾಮಿ ಮತ್ತು ಗೌಡಯ್ಯ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದರು.

ಇದನ್ನು ಓದಿ: ಕಂತೆ ಕಂತೆ ಕೂಡಿಟ್ಟ ಪಾಪದ ಹಣದ ಲೆಕ್ಕ ಎಷ್ಟು?

ಅಧಿಕಾರಿಗಳನ್ನು ವಿಚರಣೆಗೊಳಪಡಿಸಬೇಕಿರುವ ಕಾರಣ ಸೇವೆಯಲ್ಲಿ ಮುಂದುವರೆದರೆ ತಮ್ಮ ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿತ್ತು. ಈ ಮನವಿಯನ್ನು ಪುರಸ್ಕರಿಸಿದ ಸರ್ಕಾರವು ಇಬ್ಬರನ್ನೂ ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.

Follow Us:
Download App:
  • android
  • ios