ಪೇದೆ ಕನಕರೆಡ್ಡಿ , ಕಲಬುರಗಿಯಲ್ಲಿ ಮರಳು ಮಾಫಿಯಾ ಜೊತೆ ಶಾಮೀಲಾಗಿ ಅಕ್ರಮ ಆಸ್ತಿ ಗಳಿಸಿದ್ದಾನೆ ಎನ್ನುವ ಆರೋಪಗಳು ಕೇಳಿಬಂದಿದ್ವು. ಇದಕ್ಕೆ ಪೂರಕ ವೆಂಬಂತೆ ಎರಡಂತಸ್ತಿನ ಮನೆ, ಎರಡು ಮರಳು ಸಾಗಾಣಿಕೆಯ ಟಿಪ್ಪರ್’ಗಳು, ಒಂದು ನಿವೇಶನ ಸೇರಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಪಾಸ್ತಿ ಪತ್ತೆಯಾಗಿವೆ.

ಕಲಬುರಗಿ (ಫೆ.03): ಕಲಬುರಗಿಯ ಟ್ರಾಫಿಕ್ ಪೊಲೀಸ್ ಪೇದೆಯ ಮನೆಯ ಮೇಲೆ ಇಂದು ಎಸಿಬಿ ದಾಳಿ ನಡೆದಿದೆ.

ನಗರದ ಸುಪರ್ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯ ಪೇದೆ ಕನಕರೆಡ್ಡಿ ಎಂಬಾತನ ವಿರುದ್ಧ ಆದಾಯಕ್ಕೂ ಮೀರಿದ ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದ್ದು, ಮನೆಯ ಮೇಲೆ ಎಸಿಬಿ ದಾಳಿ ನಡೆದಿದೆ.

ಕಲಬುರಗಿ ನಗರದ ರಾಘವೇಂದ್ರ ಕಾಲೋನಿಯ ಅಗ್ರಿಕಲ್ಚರ್ ಲೇಔಟನಲ್ಲಿನ ಮನೆಯ ಮೇಲೆ ಬೆಳಂಬೆಳಿಗ್ಗೆ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ಮುಂದುವರೆದಿದೆ.

ಪೇದೆ ಕನಕರೆಡ್ಡಿ , ಕಲಬುರಗಿಯಲ್ಲಿ ಮರಳು ಮಾಫಿಯಾ ಜೊತೆ ಶಾಮೀಲಾಗಿ ಅಕ್ರಮ ಆಸ್ತಿ ಗಳಿಸಿದ್ದಾನೆ ಎನ್ನುವ ಆರೋಪಗಳು ಕೇಳಿಬಂದಿದ್ವು. ಇದಕ್ಕೆ ಪೂರಕ ವೆಂಬಂತೆ ಎರಡಂತಸ್ತಿನ ಮನೆ, ಎರಡು ಮರಳು ಸಾಗಾಣಿಕೆಯ ಟಿಪ್ಪರ್’ಗಳು, ಒಂದು ನಿವೇಶನ ಸೇರಿ ಕೋಟಿಗಟ್ಟಲೆ ಬೆಲೆ ಬಾಳುವ ಆಸ್ತಿಪಾಸ್ತಿ ಪತ್ತೆಯಾಗಿವೆ.

ಎಸಿಬಿ ಎಸ್ಪಿ ಅನಿತಾ ಹದ್ದಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಖಲೆ ಪತ್ರಗಳ ಪರಿಶೀಲನೆ ಮುಂದುವರೆದಿದೆ.