ರಾಜ್ಯಾದ್ಯಂತ ವಿವಿಧ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಎಲ್ಲೆಲ್ಲಿ ದಾಳಿ ನಡೆಸಿದ್ದಾರೆ ಇಲ್ಲಿದೆ ಡೀಟೇಲ್ಸ್.
ಬೆಂಗಳೂರು (ಡಿ.22): ರಾಜ್ಯಾದ್ಯಂತ ವಿವಿಧ ಅಧಿಕಾರಿಗಳಿಗೆ ಬೆಳ್ಳಂಬೆಳಿಗ್ಗೆ ಎಸಿಬಿ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಎಲ್ಲೆಲ್ಲಿ ದಾಳಿ ನಡೆಸಿದ್ದಾರೆ ಇಲ್ಲಿದೆ ಡೀಟೇಲ್ಸ್.
ಬೆಂಗಳೂರು
ಬಸವೇಶ್ವರ ನಗರದಲ್ಲಿರುವ ಬಿಬಿಎಂಪಿ ಬಿಲ್ ಕಲೆಕ್ಟರ್ ನವೀನ್ ಮನೆ ಮೇಲೆ ದಾಳಿ ನಡೆದಿದೆ. ಅದೇ ರೀತಿ ಮಹದೇವಪುರದಲ್ಲಿರುವ ಬಿಬಿಎಂಪಿ ಸಹಾಯಕ ನಿರ್ದೇಶಕ ಬಸವರಾಜು ಮನೆ ಮೇಲೆ ದಾಳಿ ನಡೆದಿದೆ.
ದಾವಣಗೆರೆ
ವಿವೇಕಾನಂದ ಬಡಾವಣೆಯಲ್ಲಿರುವ KRDL ಸಹಾಯಕ ಇಂಜಿನಿಯರ್ ಉಮೇಶ್ ಪಾಟೀಲ್ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಎಸ್ಪಿ ಪುಟ್ಟಮಾದಯ್ಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಬೆಳ್ತಂಗಡಿ
ಗುರುವಾಯನಕೆರೆ ಗ್ರಾಮದಲ್ಲಿ ಇರುವ ತಾಲೂಕು ಕಚೇರಿ ಅಧಿಕಾರಿ ಗೋವಿಂದ ನಾಯ್ಕರ ಮನೆಗೂ ದಾಳಿ ಮಾಡಲಾಗಿದೆ. ಗೋವಿಂದ ನಾಯ್ಕರ ಪತ್ನಿ ಲೀಲಾವತಿ ಪೂಂಜಾಲಕಟ್ಟೆ ಆರೋಗ್ಯಾಧಿಕಾರಿ. ಇಬ್ಬರ ವ್ಯವಹಾರ, ದಾಖಲೆಪತ್ರವನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ
ಕುವೆಂಪು ನಗರದ 1ನೇ ಕ್ರಾಸ್ನಲ್ಲಿರುವ ಬಳ್ಳಾರಿ ಜಿಲ್ಲಾಸ್ಪತ್ರೆ ಪ್ರಾಂಶುಪಾಲರಾಗಿರುವ ಡಾ. ಪಂಪಾಪತಿ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಚಿತ್ರದುರ್ಗ
ಮೊಳಕಾಲ್ಮೂರಿನ ಪಿಡಬ್ಲೂಡಿ ಇಂಜಿನಿಯರ್ ಪುಟ್ಟಲಿಂಗಯ್ಯ ಮನೆ ಮೇಲೆ ದಾಳಿ ನಡೆಸಿ 30 ಸಾವಿರ ನಗದು ವಶಪಡಿಸಿಕೊಳ್ಳಲಾಗಿದೆ. ಅಧಿಕಾರಿಗಳು ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.
