ಬೆಳ್ಳಂಬೆಳಗ್ಗೆ ದಾವಣಗೆರೆಯಲ್ಲಿ ಎಸಿಬಿ ಶಾಕ್

First Published 10, Apr 2018, 11:10 AM IST
ACB Raid In Davanagere
Highlights

ಬೆಳ್ಳಂಬೆಳಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ಎಸಿಬಿ ಶಾಕ್ ನೀಡಲಾಗಿದೆ. ಜಗಳೂರು ತಾಲ್ಲೂಕಿನ ಮಡ್ರಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಎಟಿ ನಾಗರಾಜ್ ಅವರಿಗೆ ಎಸಿಬಿ ಅಧಿಗಾರಿಗಳು ಬಿಸಿ ಮುಟ್ಟಿಸಿದ್ದಾರೆ.

ದಾವಣಗೆರೆ : ಬೆಳ್ಳಂಬೆಳಗ್ಗೆ ದಾವಣಗೆರೆ ಜಿಲ್ಲೆಯಲ್ಲಿ ಎಸಿಬಿ ಶಾಕ್ ನೀಡಲಾಗಿದೆ. ಜಗಳೂರು ತಾಲ್ಲೂಕಿನ ಮಡ್ರಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಎಟಿ ನಾಗರಾಜ್ ಅವರಿಗೆ ಎಸಿಬಿ ಅಧಿಗಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಬೆಳ್ಳಂಬೆಳಗ್ಗೆ ನಡೆದ ಎಸಿಬಿ ದಾಳಿಯ ವೇಳೆ ಅತ್ಯಧಿಕ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಪತ್ತೆಯಾಗಿದೆ.   2 ಐಷಾರಾಮಿ ಕಾರುಗಳು, 2 ಲಾರಿ, 4 ಬೈಕ್, 5 ಮನೆಗಳನ್ನು ಪತ್ತೆ ಮಾಡಿದ್ದಾರೆ.  

ಜಗಳೂರು ತಾಲ್ಲೂಕಿನ ಗೌರಿಪುರದಲ್ಲಿ 2 ಮನೆ, ಹಿರೆಮಲ್ಲನ ಹೊಳೆಯಲ್ಲಿ 1 ಮನೆ, ಕೂಡ್ಲಿಗಿ ಹಾಗೂ ದಾವಣಗೆರೆಯ ಎಸ್ ಎಸ್ ಬಡಾವಣೆಯಲ್ಲಿ ಒಂದು ಮನೆ ಪತ್ತೆ ಇರುವುದು ದಾಳಿ ವೇಳೆ ತಿಳಿದು ಬಂದಿದೆ.  

ಎಸಿಬಿ ಎಸ್ ಪಿ ವಂಶಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆದಿದೆ. ಅತೀ ಭ್ರಷ್ಟ ಪಿಡಿಓ ಎಂಬ ಹೇಸರು ಮಾಡಿದ್ದ ಪಿಡಿಓ ನಾಗರಾಜ್, ಕೂಡ್ಲಿಗಿ ಹಾಗೂ ದಾವಣಗೆರೆಯಲ್ಲಿ ವ್ಯವಹಾರ ಮಾಡಲು ಕಚೇರಿಗಳನ್ನು ಹೊಂದಿದ್ದರು ಎನ್ನುವುದು ತಿಳಿದು ಬಂದಿದೆ.

loader