ಮುಂಬೈ(ಡಿ.21):206 ಕೋಟಿ ರೂಪಾಯಿಯ ಚಿಕ್ಕಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆಗೆ ಭ್ರಷ್ಟಾಚಾರ ನಿಗ್ರಹ ದಳವು ಕ್ಲೀನ್ ಚಿಟ್ ನೀಡಿದೆ.

ಇ ಟೆಂಡರ್ ಕರೆಯದೇ ಬುಡಕಟ್ಟು ಪ್ರದೇಶದ ಶಾಲೆಗಳಿಗೆ ಸ್ವೀಟ್ ಸ್ನ್ಯಾಕ್ಸ್, ಚಿಕ್ಕಿ ಸರಬರಾಜು ಗುತ್ತಿಗೆಯನ್ನ ನೀಡಿದ ಆರೋಪ ಪಂಕಜಾ ಮುಂಡೆ ಮೇಲಿತ್ತು. ಇದೀಗ ಎಸಿಬಿ ಪ್ರಕರಣವನ್ನ ಮುಕ್ತಾಯಗೊಳಿ ಸಿ ರಿಪೋರ್ಟ್ ಸಲ್ಲಿಸಿದೆ.

`ಎಸಿಬಿ ಈ ಪ್ರಕರಣವನ್ನ ಮುಕ್ತಾಯಗೊಳಿಸುತ್ತಿದೆ. ಮುಂಡೆ ಮೇಲಿನ ಾರೋಪ ಸಂಬಂಧಿಸಿದಂತೆ ಸೂಕ್ತ ಸಾಕ್ಷ್ಯಗಳಿಲ್ಲ' ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ಧಾರೆ.