Asianet Suvarna News Asianet Suvarna News

ಎಸಿಬಿ ದಾಳಿಗೊಳಗಾದ ತಹಶೀಲ್ದಾರ್ ರಘುಮೂರ್ತಿ ಭೂ ಪ್ರಕರಣದಲ್ಲೂ ಭಾಗಿ

ಭೂ ದಾಖಲೆಗಳ ಜಂಟಿ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಫೆ.16, 2016 ರಂದು ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಬರೆದಿರುವ ಪತ್ರ ಮತ್ತು ಭೂ ದಾಖಲೆಗಳ ಜಂಟಿ ನಿರ್ದೇಶಕರು ಸಲ್ಲಿಸಿದ್ದ ವರದಿಗೂ ಕಿಮ್ಮತ್ತಿಲ್ಲದಂತಾಗಿದೆ. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ರಘುಮೂರ್ತಿ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.

ಸರ್ಕಾರಿ ಗೋಮಾಳವನ್ನ ದರಖಾಸ್ತು ಮಂಜೂರಾತಿ ಎಂದು ದಾಖಲೆ ಸೃಷ್ಟಿಸಿ ಅಂದಾಜು 80  ಕೋಟಿ ರೂ.ಮೌಲ್ಯದ ಸರ್ಕಾರಿ ಜಮೀನನ್ನ ಒಂದೇ ಕುಟುಂಬದ ಸದಸ್ಯರುಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ದಾಖಲೆಗಳ ಸಮೇತ ಸುವರ್ಣನ್ಯೂಸ್-ಕನ್ನಡಪ್ರಭ ವರ್ಷದ ಹಿಂದೆಯೇ ವರದಿ ಪ್ರಸಾರ ಮಾಡಿತ್ತು. 

AC Rammurthy involved land scam

ಬೆಂಗಳೂರು(ಮೇ.10): ರಾಮನಗರ ತಹಶೀಲ್ದಾರ್​ ರಘುಮೂರ್ತಿ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿರುವ ಬೆನ್ನಲ್ಲೇ ಈಗ  17 ಎಕರೆ ವಿಸ್ತೀರ್ಣದ ಸರ್ಕಾರಿ ಗೋಮಾಳವನ್ನು ಒಂದೇ ಕುಟುಂಬದ ಸದಸ್ಯರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಪ್ರಕರಣದಲ್ಲಿಯೂ ರಘುಮೂರ್ತಿ ಅವರ ವಿರುದ್ಧ  ಸರ್ಕಾರ ಕ್ರಮ ಕೈಗೊಳ್ಳದಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರು ದಕ್ಷಿಣ ತಾಲೂಕಿನ ಕೆಂಗೇರಿ ಹೋಬಳಿಯ ಬಿ.ಎಂ.ಕಾವಲ್ ಗ್ರಾಮದಲ್ಲಿನ ಸರ್ವೆ ನಂ 3ರಲ್ಲಿನ ಸರ್ಕಾರಿ ಗೋಮಾಳದಲ್ಲಿನ 17 ಎಕರೆಗೆ ಅಕ್ರಮ ಖಾತೆ ಮಾಡಿಕೊಟ್ಟಿರುವ ಪ್ರಕರಣದಲ್ಲಿ   ವಿಶೇಷ ತಹಶೀಲ್ದಾರ್  ರಘುಮೂರ್ತಿ ಅವರನ್ನು ಅಮಾನತುಗೊಳಿಸಲು ಜಿಲ್ಲಾಧಿಕಾರಿ ವಿ.ಶಂಕರ್  ಅವರು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಮಾಡಿದ್ದ ಶಿಫಾರಸ್ಸು ನೆನೆಗುದಿಗೆ ಬಿದ್ದಿದೆ.

ಭೂ ದಾಖಲೆಗಳ ಜಂಟಿ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಫೆ.16, 2016 ರಂದು ವರದಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿ ಬರೆದಿರುವ ಪತ್ರ ಮತ್ತು ಭೂ ದಾಖಲೆಗಳ ಜಂಟಿ ನಿರ್ದೇಶಕರು ಸಲ್ಲಿಸಿದ್ದ ವರದಿಗೂ ಕಿಮ್ಮತ್ತಿಲ್ಲದಂತಾಗಿದೆ. ಈ ವರದಿ ಸರ್ಕಾರಕ್ಕೆ ಸಲ್ಲಿಕೆಯಾದ ನಂತರ ರಘುಮೂರ್ತಿ ಅವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಲಾಗಿತ್ತು.

ಸರ್ಕಾರಿ ಗೋಮಾಳವನ್ನ ದರಖಾಸ್ತು ಮಂಜೂರಾತಿ ಎಂದು ದಾಖಲೆ ಸೃಷ್ಟಿಸಿ ಅಂದಾಜು 80  ಕೋಟಿ ರೂ.ಮೌಲ್ಯದ ಸರ್ಕಾರಿ ಜಮೀನನ್ನ ಒಂದೇ ಕುಟುಂಬದ ಸದಸ್ಯರುಗಳಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿರುವ ಬಗ್ಗೆ ದಾಖಲೆಗಳ ಸಮೇತ ಸುವರ್ಣನ್ಯೂಸ್-ಕನ್ನಡಪ್ರಭ ವರ್ಷದ ಹಿಂದೆಯೇ ವರದಿ ಪ್ರಸಾರ ಮಾಡಿತ್ತು. 

ಈ ವರದಿ ಆಧರಿಸಿ ಭೂ ದಾಖಲೆಗಳ ಜಂಟಿ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ವಿಸ್ತೃತ ವರದಿ ಸಲ್ಲಿಸಿದ್ದು, ವಿಶೇಷ ತಹಶೀಲ್ದಾರ್​  ಎಂ.ರಘಮೂರ್ತಿ, ಶಿರಸ್ತೆದಾರ್ ಶ್ರೀರಾಮ್, ಹೊನ್ನಕಸ್ತೂರಿ, ರಾಜಸ್ವ  ನಿರೀಕ್ಷಕರಾದ ಶಿಲ್ಪ, ಶೇಖರ್, ಭೂ ಮಾಪಕ ಟಿ.ಉಮೇಶ್, ಎಂ.ಎಸ್. ಕೃಪಾ, ಮಮತಾ, ಗ್ರಾಮ ಲೆಕ್ಕಿಗ ವಾಸು, ಕಂಪ್ಯೂಟರ್ ಆಪರೇಟರ್ ವೀಣಾ, ಷಾಫಿಯಾ ಕೌರ್ಸ ಅವರನ್ನು ಅಮಾನತುಗೊಳಿಸಬೇಕು ಎಂದು ಶಿಫಾರಸ್ಸು ಮಾಡಿದ್ದರು.

ಒಂದೇ ದಿನದಲ್ಲಿ ಆದೇಶ

ಸರ್ಕಾರಿ ಜಮೀನನ್ನು ಉದ್ದೇಶಪೂರ್ವಕವಾಗಿ ಮತ್ತು ನಿಯಮಬಾಹಿರವಾಗಿ ಮ್ಯುಟೇಷನ್ ಮಾಡಲಾಗಿದೆ. ದುರಸ್ತಿಯಾದ ಹೊಸ ಸರ್ವೆ ನಂಬರ್ಗಳಿಗೆ ಸರ್ವೆ ಶಾಖೆಯಿಂದ ಸರ್ಕಾರಿ ಖರಾಬು ಜಮೀನಿಗೆ ಚೆಕ್ ಲಿಸ್ಟ್ ಹೊರಡಿಸಿ ಬಹು ಕೋಟಿ ಮೌಲ್ಯದ ಸರ್ಕಾರಿ ಜಮೀನು ಖಾಸಗಿಯವರ ಪಾಲಾಗಿರುವುದರಲ್ಲಿ ವಿಶೇಷ ತಹಶೀಲ್ದಾರ್ ರಘುಮೂರ್ತಿ ಸೇರಿದಂತೆ ಉಳಿದ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದರು.

ಒಂದೇ ದಿನದಲ್ಲಿ ಬಂದಂತಹ ಕಡತವನ್ನು ಸರಿಯಾಗಿ ಪರಿಶೀಲಿಸದೆ ಒಂದೇ ದಿನದಲ್ಲಿ ಆದೇಶ ಮಾಡಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಿದ್ದ ಜಿಲ್ಲಾಧಿಕಾರಿ ಅವರು, ಅರ್ಜಿದಾರರು ಸಲ್ಲಿಸಿರುವ ಅರ್ಜಿಯಲ್ಲಿ 4 ಜನರ ತಂದೆ ಒಬ್ಬರೆ ಆಗಿರುವುದು ಒಂದು ಒಂದೇ ಕುಟುಂಬಕ್ಕೆ 20 ಎಕರೆ  ಮಂಜೂರು ಮಾಡಲು ಸಾಧ್ಯವೇ? ಎಂದು ವರದಿಯಲ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ಮಂಜೂರು ಮಾಡುವ ಸಂದರ್ಭದಲ್ಲಿ ಪೋಡಿ ಆಗಿರುವ ಬಗ್ಗೆ ಮತ್ತು ಮಂಜೂರಾತಿ ಕಡತಗಳನ್ನು ಪರಿಶೀಲಿಸದೆಯೇ ಪಹಣಿ ರಚಿಸಲು ಆದೇಶಿಸಲಾಗಿದೆ. ಖೋಟಾ ದಾಖಲೆ ಸೃಷ್ಟಿಸಿ ಸರ್ಕಾರಿ ಜಮೀನು ಪರಭಾರೆಯಲ್ಲಿ ಭಾಗಿ ಆಗಿ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ವರದಿಯಲ್ಲಿ ಜಿಲ್ಲಾಧಿಕಾರಿ ತಿಳಿಸಿದ್ದರು.

ಏನದು ಪ್ರಕರಣ?

ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ ಬಿ.ಎಂ.ಕಾವಲ್ ಗ್ರಾಮದ ಸರ್ವೆ ನಂರ್ಬ 3 ರಲ್ಲಿ ಒಟ್ಟು 7 ಬ್ಲಾಕ್‌ಗಳಲ್ಲಿನ ಗೋಮಾಳವನ್ನ ಒಂದೇ ಕುಟುಂಬದ ಸದಸ್ಯರಿಗೆ ಖಾತೆ ಮಾಡಿಕೊಡಲಾಗಿತ್ತು.  ಸರ್ವೆ ನಂರ್ಬ 3ರಲ್ಲಿನ 3/ 1 ಸೇರಿದಂತೆಒಟ್ಟು 7 ಸರ್ವೆ ನಂಬರ್​ಗಳಲ್ಲಿ  ತಲಾ 4 ಎಕರೆ 13 ಗುಂಟೆ, 4 ಎಕರೆ 13 ಗುಂಟೆ, 4 ಎಕರೆ 5 ಗುಂಟೆ, 12 ಗುಂಟೆ, 4 ಎಕರೆ 18ಗುಂಟೆ,  ವಿಸ್ತೀರ್ಣದ ಒಟ್ಟು 17 ಎಕರೆ, ಬೆಂಗಳೂರು ನಗರದ ಕುಂದನಲಾಲ್ ದಯಾಲಾಲ್ ಮತ್ತು ಇವರ ಮಗ ಕಿಶೋರ್​ಕುಮಾರ್​ ಹಾಗೂ ಇವರ ಕುಟುಂಬದ ಸದಸ್ಯರ ಹೆಸರಿಗೆ ಖಾತೆ ಮಾಡಿಕೊಡಲಾಗಿತ್ತು.

ಜಯನಗರ ಮತ್ತು ಕೆಂಗೇರಿ ವ್ಯಾಪ್ತಿಯಲ್ಲಿನ ಹಿರಿಯ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಆಗಸ್ಟ್ 13, 2015 ಇವರ ಹೆಸರಿಗೆ ನೋಂದಣಿ ಆಗಿದೆ. ರೂ. 4,12,50,000, 4,32,50,000, 4,32,50,000 , 4,35,50,000,30,00,000  ಸೇರಿದಂತೆ ಒಟ್ಟು 17 ಎಕರೆಗೆ  17 ಕೋಟಿ 43 ಲಕ್ಷ ರೂ. ಮೊತ್ತಕ್ಕೆ  5  ಸೇಲ್ ಡೀಡ್‌ಗಳನ್ನು  ಒಂದೇ ಕುಟುಂಬದ ಸದಸ್ಯರಾದ ಕುಂದನಮಲ್ ದಯಾಲಾಲ್ ಮತ್ತು  ಕುಟುಂಬ ಸದಸ್ಯರಾದ ಹಿತೇಶ್‌ಕುಮಾರ್, ಕಿಶೋರ್'ಕುಮಾರ್, ಡಿಂಪೇಶ್‌ಕುಮಾರ್ ಎಂಬುವರಿಗೆ ಅಕ್ಟೋಬರ್ 15,2015, ರಂದು ನೋಂದಣಿ  ಮಾಡಿಕೊಡಲಾಗಿತ್ತು.

ವರದಿ: ಜಿ.ಮಹಾಂತೇಶ್, ಸುವರ್ಣನ್ಯೂಸ್

Follow Us:
Download App:
  • android
  • ios