ದೇಶದಲ್ಲಿ ಬೇಸಿಗೆ ಹತ್ತಿರವಾಗುತ್ತಿದ್ದಂತೆ ಸಿಮೆಂಟ್‌, ಸ್ಟೀಲ್‌ ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಕೆಲಸಗಾರರು ಬಿರು ಬಿಸಿಲು ಮತ್ತು ಸೆಕೆಯ ಇರುವಾಗಲೇ ಹೆಲ್ಮೆಟ್‌ ಹಾಕಿಕೊಂಡು ಕೆಲಸ ಮಾಡಬೇಕಾಗುತ್ತದೆ.

ಹೈದ್ರಾಬಾದ್ : ದೇಶದಲ್ಲಿ ಬೇಸಿಗೆ ಹತ್ತಿರವಾಗುತ್ತಿದ್ದಂತೆ ಸಿಮೆಂಟ್‌, ಸ್ಟೀಲ್‌ ಮತ್ತು ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಕೆಲಸಗಾರರು ಬಿರು ಬಿಸಿಲು ಮತ್ತು ಸೆಕೆಯ ಇರುವಾಗಲೇ ಹೆಲ್ಮೆಟ್‌ ಹಾಕಿಕೊಂಡು ಕೆಲಸ ಮಾಡಬೇಕಾಗುತ್ತದೆ.

ಇದರಿಂದ ಕಾರ್ಮಿಕರಿಗೆ ಕೂದಲು ಉದುರುವಿಕೆ ಭೀತಿ ಮತ್ತು ಕಿರಿಕಿರಿ ಅನುಭವ ಆಗೋದುಂಟು. ಆದರೆ, ಮುಂದಿನ ದಿನಗಳಲ್ಲಿ ಕಾರ್ಮಿಕರು ಇಂಥ ಸಮಸ್ಯೆ ಬಗ್ಗೆ ಚಿಂತೆ ಬಿಡಿ.

ಯಾಕೆಂದ್ರೆ, ಕಾರ್ಮಿಕರ ಇಂಥ ಸಮಸ್ಯೆಗಳನ್ನು ದೂರ ಮಾಡಲೆಂದೇ ಹೈದರಾಬಾದ್‌ ಮೂಲದ ಕಂಪನಿಯೊಂದು ಹವಾನಿಯಂತ್ರಿತ ಹೆಲ್ಮೆಟ್‌ ಅನ್ನು ಕಂಡು ಹಿಡಿದಿದೆ. ಇದು ಚಾರ್ಜ್ ಮಾಡಬಹುದಾದ ಬ್ಯಾಟರಿಯಾಧಾರಿತ ಎಸಿ ಹೆಲ್ಮೆಟ್‌ ಆಗಿದ್ದು, 2-8 ತಾಸುಗಳ ಕಾಲ ಕಾರ್ಯ ನಿರ್ವಹಿಸಲಿದೆ. ಅಲ್ಲದೆ, ಇದು ಧರಿಸೋದ್ರಿಂದ ಕೂದಲೂ ಉದ್ರಲ್ಲವಂತೆ.