ಇಂಧನ ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಇರುವ ಕೇಂದ್ರ ಸರ್ಕಾರದ 2500ಕ್ಕೂ ಹೆಚ್ಚು ಕಚೇರಿಗಳಲ್ಲಿನ ಹಳೆಯ ಹವಾನಿಯಂತ್ರಣ ವ್ಯವಸ್ಥೆ (ಎ.ಸಿ) ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ನವದೆಹಲಿ: ಇಂಧನ ಉಳಿಸುವ ನಿಟ್ಟಿನಲ್ಲಿ ದೇಶಾದ್ಯಂತ ಇರುವ ಕೇಂದ್ರ ಸರ್ಕಾರದ 2500ಕ್ಕೂ ಹೆಚ್ಚು ಕಚೇರಿಗಳಲ್ಲಿನ ಹಳೆಯ ಹವಾನಿಯಂತ್ರಣ ವ್ಯವಸ್ಥೆ (ಎ.ಸಿ) ಬದಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ನೂತನವಾಗಿ ಅಳವಡಿಸಲು ನಿರ್ಧರಿಸಿರುವ ಎ.ಸಿಗಳು ಹಳೇ ಎ.ಸಿಗಳಿಗಿಂತ ಶೇ.30 ರಷ್ಟು ಕಡಿಮೆ ವಿದ್ಯುತ್ ಬಳಸುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹವಾಮಾನ ಬದಲಾವಣೆ ಕುರಿತಾದ ಪ್ಯಾರಿಸ್ ಒಪ್ಪಂದಕ್ಕೆ ಪೂರಕವಾಗಿ 2030ರ ಒಳಗಾಗಿ ವಿದ್ಯುತ್ ಅವಲಂಬನೆ ಕಡಿಮೆಗೊಳಿಸಲು ಭಾರತ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಕಾರಣಕ್ಕಾಗಿಯೇ ಈಗಾಗಲೇ ಸರ್ಕಾರ ದೇಶಾದ್ಯಂತ 88 ಕೋಟಿ ಎಲ್‌ಇಡಿ ಬಲ್ಬ್ ವಿತರಣೆ ಮಾಡಿದೆ.