ಮುಂಬೈ (ಅ.05): ಸರ್ಜಿಕಲ್ ದಾಳಿ ಬಗ್ಗೆ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ನೀಡಿರುವ ಹೇಳಿಕೆಯನ್ನು ಸಮಾಜವಾದಿ ಪಕ್ಷ ನಾಯಕ ಅಬು ಆಝ್ಮಿ ಖಂಡಿಸಿದ್ದಾರೆ.

ಸಂಜಯ್ ನಿರುಪಮ್ ನೀಡಿರುವ ಹೇಳಿಕೆಯು ಯೋಧರ ಹಾಗೂ ಸೇನೆಯ ಅತ್ಮವಿಶ್ವಾಸಕ್ಕೆ ಧಕ್ಕೆಯನ್ನುಂಟು ಮಾಡುತ್ತವೆ ಎಂದು ಅಬು ಆಝ್ಮಿ ಹೇಳಿದ್ದಾರೆ.

ಸರ್ಜಿಕಲ್ ದಾಳಿಯ ವಿಚಾರದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತಾರೆ; ಸಂಜಯ್ ನಿರುಪಮ್ ವ್ಯತಿರಿಕ್ತ ಹೇಳಿಕೆ ನೀಡುತ್ತಾರೆ, ಒಂದೇ ಪಕ್ಷದಿಂದ ಎರಡು ರೀತಿಯ ಹೇಳಿಕೆಗಳು ಬರಬಾರದು ಎಂದು ಆಝ್ಮಿ ಹೇಳಿದ್ದಾರೆ.

ಸರ್ಜಿಕಲ್ ದಾಳಿ ನಡೆದಿರುವ ಬಗ್ಗೆ ಎನ್’ಡಿಏ ಸರ್ಕಾರವು ಪುರಾವೆ ಒದಗಿಸಬೇಕೆಂದು ಸಂಜಯ್ ನಿರುಪಮ್ ಹೇಳಿಕೆ ನೀಡಿದ್ದರು.