ರಾಜ್ಯದ 1ನೇ ಹಾಗೂ 224ನೇ ಕ್ಷೇತ್ರ ಎರಡೂ ಮಹಿಳಾ ವಶ

First Published 11, Mar 2018, 7:53 AM IST
About Karnatakas 1st and 224th Women MLA
Highlights

ರಾಜ್ಯದ ಮೊದಲ ಹಾಗೂ ಕೊನೆಯ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಈಗ ಮಹಿಳಾ ಶಾಸಕರಿದ್ದಾರೆ. ನಿಪ್ಪಾಣಿಯಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ಶಾಸಕಿಯಾಗಿದ್ದರೆ, ಗುಂಡ್ಲುಪೇಟೆಯನ್ನು ಕಾಂಗ್ರೆಸ್ಸಿನ ಗೀತಾ ಮಹದೇವಪ್ರಸಾದ್ ಪ್ರತಿನಿಧಿಸುತ್ತಿದ್ದಾರೆ.

ರಾಜ್ಯದಲ್ಲಿರುವ 224 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣಾ ಆಯೋಗ ಒಂದೊಂದು ಸಂಖ್ಯೆ ಕೊಟ್ಟಿದೆ. ನಿಪ್ಪಾಣಿಯಿಂದ ಆರಂಭವಾಗುವ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಗುಂಡ್ಲುಪೇಟೆಯಲ್ಲಿ ಅಂತ್ಯವಾಗುತ್ತದೆ. ಅಂದರೆ ನಿಪ್ಪಾಣಿ ಪ್ರಥಮ ಕ್ಷೇತ್ರವಾದರೆ, ಗುಂಡ್ಲುಪೇಟೆ 224ನೇ ವಿಧಾನಸಭೆ ಕ್ಷೇತ್ರ. ವಿಶೇಷ ಎಂದರೆ, ರಾಜ್ಯದ ಮೊದಲ ಹಾಗೂ ಕೊನೆಯ ವಿಧಾನಸಭಾ ಕ್ಷೇತ್ರಗಳೆರಡರಲ್ಲೂ ಈಗ ಮಹಿಳಾ ಶಾಸಕರಿದ್ದಾರೆ. ನಿಪ್ಪಾಣಿಯಲ್ಲಿ ಬಿಜೆಪಿಯ ಶಶಿಕಲಾ ಜೊಲ್ಲೆ ಶಾಸಕಿಯಾಗಿದ್ದರೆ, ಗುಂಡ್ಲುಪೇಟೆಯನ್ನು ಕಾಂಗ್ರೆಸ್ಸಿನ ಗೀತಾ ಮಹದೇವಪ್ರಸಾದ್ ಪ್ರತಿನಿಧಿಸುತ್ತಿದ್ದಾರೆ. 2013ರಲ್ಲಿ ಗುಂಡ್ಲುಪೇಟೆಯಿಂದ ಎಚ್.ಎಸ್. ಮಹದೇವಪ್ರಸಾದ್ ಆಯ್ಕೆಯಾಗಿದ್ದರು. ಅವರ ನಿಧನಾನಂತರ ನಡೆದ ಉಪಚುನಾವಣೆಯಲ್ಲಿ ಗೀತಾ ಆಯ್ಕೆಯಾಗಿದ್ದರು.

loader