ಚೆನ್ನೈ[ಮಾ.02]: ದೇಶದ ಮೇಲೆ ದಾಳಿಗೆ ಬಂದಿದ್ದ ಪಾಕಿಸ್ತಾನದ ಎಫ್‌-16 ಯುದ್ಧ ವಿಮಾನವೊಂದನ್ನು ಯಶಸ್ವಿಯಾಗಿ ಹೊಡೆದುರುಳಿಸಿ, ಮತ್ತೊಂದು ಎಫ್‌-16 ನಾಶ ಮಾಡಲು ಹೋಗಿ ಪಾಕ್‌ ವಶವಾದ ಪೈಲಟ್‌ ‘ವಿಂಗ್‌ ಕಮಾಂಡರ್‌’ ಅಭಿನಂದನ್‌ ವರ್ತಮಾನ್‌ ಅವರು ಈಗ ದೇಶ- ವಿದೇಶಗಳಾದ್ಯಂತ ಪ್ರಸಿದ್ಧರಾಗಿದ್ದಾರೆ.

ಅಭಿನಂದನ್‌ ಅವರಷ್ಟೇ ಅಲ್ಲ, ಇದೀಗ ಅವರ ಮೀಸೆ ಹಾಗೂ ಹೇರ್‌ಸ್ಟೈಲ್‌ ಕೂಡ ಜನಪ್ರಿಯವಾಗಿದ್ದು, ಆನ್‌ಲೈನ್‌ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.

ಸಾಕಷ್ಟು ಮಂದಿ ಅಭಿನಂದನ್‌ ಅವರ ಮೀಸೆ ಹಾಗೂ ತಲೆಕೂದಲಿನ ರೇಖಾಚಿತ್ರವನ್ನಷ್ಟೇ ವಾಟ್ಸ್‌ಆ್ಯಪ್‌ನಲ್ಲಿ ತಮ್ಮ ಪ್ರೊಫೈಲ್‌ ಫೋಟೋ ಮಾಡಿಕೊಂಡಿದ್ದಾರೆ. ಸ್ಟೇಟಸ್‌ಗೂ ಹಾಕಿಕೊಂಡಿದ್ದಾರೆ. ಫೇಸ್‌ಬುಕ್‌ ಹಾಗೂ ಟ್ವೀಟರ್‌ನಲ್ಲೂ ಶೇರ್‌ ಮಾಡಿ ವೀರ ಪೈಲಟ್‌ ಗುಣಗಾನ ಮಾಡಿದ್ದಾರೆ.