ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳುತ್ತಿದ್ದಂತೆ ಸಂಭ್ರಮ ಮುಗಿಲು ಮುಟ್ಟಿದೆ. ದೇಶದೆಲ್ಲೆಡೆ ಅಭಿನಂದನ್‌ಗೆ ಅದ್ಧೂರಿ ಸ್ವಾಗತ ಕೋರಿದ್ದಾರೆ. ಇದೀಗ ಅಮೂಲ್ ಮಿಲ್ಕ್ ಕಂಪನಿ ಕಾರ್ಟೂನ್ ಮೂಲಕ ಅತ್ಯುತ್ತಮ ಗೌರವ ಸ್ವಾಗತ ಕೋರಿದೆ.
ಅಹಮ್ಮದಾಬಾದ್(ಮಾ.02): ಭಾರತ ಗಡಿ ಪ್ರದೇಶದೊಳಗೆ ನುಗ್ಗಲು ಯತ್ನಿಸಿದ್ದ ಪಾಕಿಸ್ತಾನ ಯುದ್ಧವಿಮಾನವನ್ನು ಹೊಡೆದುರುಳಿಸಿ, ಪಾಕ್ ನೆಲದಲ್ಲಿ ಸೆರೆಸಿಕ್ಕ ಭಾರತೀಯ ವಿಂಗ್ ಕಮಾಂಡರ್ ಅಭಿನಂದನ್ ಭಾರತಕ್ಕೆ ಮರಳಿದ್ದಾರೆ. ಭಾರತದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಕಾರ್ಟೂನ್ ಜಾಹೀರಾತು ಮೂಲಕ ಗಮನಸೆಳೆದಿರುವ ಅಮೂಲ್ (Anand Milk Union Limited)ಕಂಪನಿ ಇದೀಗ ಅಭಿನಂದನ್‌ಗೆ ಕಾರ್ಟೂನ್ ಜಾಹೀರಾತು ಮೂಲಕ ಗೌರವ ಸೂಚಿಸಿದೆ.
ಇದನ್ನೂ ಓದಿ: ಒಂದು ಕಡೆ ಸರ್ಜಿಕಲ್ ವೀರರು, ಮತ್ತೊಂದು ಕಡೆ ಮೋದಿ ಇರುವರು: ಸೀರೆಯಲ್ಲಿ ದೇಶಭಕ್ತಿಯೇ ಉಸಿರು!
ಕ್ರಿಕೆಟಿಗರು, ಸೆಲೆಬ್ರೇಟಿಗಳು, ಉದ್ಯಮಿಗಳು ಕಮಾಂಡರ್‌ಗೆ ಗೌರವದ ಸ್ವಾಗತ ಕೋರಿದ್ದಾರೆ. ವೀರ ಯೋಧನಿಗೆ ಇದೀಗ ಅಮೂಲ್ ಮಿಲ್ಕ್ ಕಂಪೆನಿ ಕಾರ್ಟೂನ್ ಮೂಲಕ ಸ್ವಾಗತ ಕೋರಿದೆ. ಅಭಿ ಜಾವೋ ಹಮಾರೆ ಪಾಸ್ ಅನ್ನೋ ಟ್ಯಾಗ್ ಲೈನ್ ಮೂಲಕ ಅಭಿನಂದರ್‌ನ್ನು ಸ್ವಾಗತಿಸಿದೆ.
ಇದನ್ನೂ ಓದಿ: ಎಲ್ಲಿಗಾದ್ರೂ ಕಳ್ಸಿ, ಪಾಕ್‌ಗೆ ಮಾತ್ರ ಬೇಡ: ಕರುನಾಡ ರೈತರ ಆಕ್ರೋಶ!
ಅಮೂಲ್ ಕಾರ್ಟೂನ್ ಜಾಹೀರಾತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಂದು ಅತ್ಯುತ್ತಮ ಕಾರ್ಟೂನ್ ಅನ್ನೋ ಹೆಗ್ಗಳಿಕೆಗೆ ಪಡೆದುಕೊಂಡಿದೆ.
