ತೆಲಗಿ ಬಹುಕೋಟಿ ಚಾಪಾಕಾಗದ ಹಗರಣದ ಪ್ರಮುಖ ಅಪರಾಧಿ  ಸಜಾ ಖೈದಿ ಅಬ್ದುಲ್ ಕರೀಂ ತೆಲಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಬೆಂಗಳೂರು (ಅ.16): ತೆಲಗಿ ಬಹುಕೋಟಿ ಚಾಪಾಕಾಗದ ಹಗರಣದ ಪ್ರಮುಖ ಅಪರಾಧಿ ಸಜಾ ಖೈದಿ ಅಬ್ದುಲ್ ಕರೀಂ ತೆಲಗಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜ್ವರದಿಂದ ಬಳಲುತ್ತಿರುವ ತೆಲಗಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶುಗರ್ ಸಮಸ್ಯೆಯಿಂದ ಹಲವು ವರ್ಷಗಳಿಂದ ಬಳಲುತ್ತಿದ್ದಾರೆ. ತೆಲಗಿ ಆರೋಗ್ಯ ಗಂಭೀರವಾಗಿ ಕ್ಷೀಣಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಕ್ಟೋರಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಬ್ದುಲ್ ಕರೀಂ ಲಾಲ್ ತೆಲಗಿ ಬಹುಕೋಟಿ ಚಾಪಾಕಾಗದ ಹಗರಣದ ಪ್ರಕರಣದಲ್ಲಿ 2002 ರಿಂದ ಜೈಲಿನಲ್ಲಿ ಸಜಾ ಖೈದಿಯಾಗಿದ್ದಾರೆ.