ರೋಹ್ ಟಕ್ :  ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ವಿವಿಧ ಪಕ್ಷಗಳು ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ವಿವಿಧ ಪಕ್ಷಗಳನ್ನು ಸೆಳೆಯಲು ಪ್ರಬಲ ಪಕ್ಷಗಳಲ್ಲಿ ಪೈಪೋಟಿ ನಡೆಯುತ್ತಿದೆ. 

ಈಗಾಗಲೇ ಎನ್ ಡಿಎ ಹಾಗೂ ಯುಪಿಎ ಒಕ್ಕೂಟಗಳಲ್ಲಿ ಗೆಲುವಿಗಾಗಿ ಮಾಸ್ಟರ್ ಪ್ಲಾನ್ ಗಳನ್ನು ಮಾಡಿಕೊಳ್ಳಲಾಗುತ್ತಿದೆ. 2 ಒಕ್ಕೂಟಗಳಲ್ಲಿಯೂ ಕೂಡ ದೇಶದ ಚುಕ್ಕಾಣಿ ಹಿಡಿಯಲು ಸ್ಪರ್ಧೆ ನಡೆಸುತ್ತಿವೆ. 

ಇದೀಗ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿಪಕ್ಷ ಒಕ್ಕೂಟದಲ್ಲಿ ಸೇರುವುದಿಲ್ಲ ಎಂದು ಹೇಳಿಕೊಂಡಿದೆ. 

ಆಮ್ ಆದ್ಮಿ ಪಕ್ಷವು ಯಾವುದೇ ಒಕ್ಕೂಟದಲ್ಲಿಯೂ ಸೇರಿ ಚುನಾವಣೆ ಎದುರಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. 

ಅಲ್ಲದೇ ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧವೂ ಕೂಡ ವಾಗ್ದಾಳಿ ನಡೆಸಿದ್ದು,  ದಿಲ್ಲಿಯಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಬಾಕಿ ಉಳಿಸಲಾಗಿದೆ. ಆದರೆ ತಮ್ಮ ಸರ್ಕಾರ ಮಾತ್ರವೇ ಜನರ ಅಭಿವೃದ್ಧಿಗಾಗೀ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದಾರೆ.