Asianet Suvarna News Asianet Suvarna News

ಇನ್ನು ಮೋದಿ ಟೀಕೆ ಬಿಟ್ಟು ಸಕಾರಾತ್ಮಕ ಪ್ರಚಾರಕ್ಕೆ ಆಮ್‌ಆದ್ಮಿ ಪಕ್ಷ ನಿರ್ಧಾರ!

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ದಾಳಿ ನಡೆಸುವುದಕ್ಕೆ ಬದಲಾಗಿ, ಧನಾತ್ಮಕ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಆಪ್‌ ನಿರ್ಧರಿ​ಸಿದೆ.

AAP to Change Political Strategy

ನವದೆಹಲಿ: ಗೋವಾ ಮತ್ತು ಪಂಜಾಬ್‌ ವಿಧಾನ​ಸಭಾ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಮ್‌ ಆದ್ಮಿ ಪಕ್ಷ ತನ್ನ ಭವಿಷ್ಯದ ಕಾರ್ಯತಂತ್ರ ಬದಲಾಯಿಸಲು ನಿರ್ಧರಿಸಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೇರವಾಗಿ ದಾಳಿ ನಡೆಸುವುದಕ್ಕೆ ಬದಲಾಗಿ, ಧನಾತ್ಮಕ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಆಪ್‌ ನಿರ್ಧರಿ​ಸಿದೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಗ್ನಿ ಪರೀಕ್ಷೆ ಎದುರಿಸುತ್ತಿರುವ ಆಪ್‌ ಧನಾತ್ಮಕ ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದೆ. ‘49 ದಿನಗಳ ಸರ್ಕಾರದಲ್ಲಿ ಮಾಡಿದ ಧನಾತ್ಮಕ ಕಾರ್ಯಗಳ ಬಗ್ಗೆ ಮನವರಿಕೆ ಮಾಡಿದ್ದ 2015ರ ವಿಧಾನ​ಸಭಾ ಚುನಾವಣೆಯಲ್ಲಿ ಬಳಸಿದ ತಂತ್ರಗಾರಿಕೆಯನ್ನೇ ನಾವು ಹೊಂದಲಿದ್ದೇವೆ. ಎಂದು ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

Latest Videos
Follow Us:
Download App:
  • android
  • ios