ಈ ಹಿಂದೆ, ಪಂಜಾಬ್ ಹಾಗೂ ಗೋವಾ ಚುನಾವಣೆಗಳನ್ನು ಬೇರೆ ಬೇರೆ ದಿನಗಳಲ್ಲಿ ನಡೆಸುವಂತೆ ಆಪ್ ಪಕ್ಷವು ಆಗ್ರಹಿಸಿತ್ತು. ಆದರೆ ಚುನಾವಣಾ ಆಯೋಗವು ಈ ಎರಡು ರಾಜ್ಯಗಳ ಚುನಾವಣೆಗಳನ್ನು ಒಂದೇ ದಿನಕ್ಕೆ (ಫೆ.4) ನಿಗದಿಪಡಿಸಿದೆ.

ನವದೆಹಲಿ (ಜ.04): ಕೇಂದ್ರ ಚುನಾವಣಾ ಆಯೋಗವು 5 ರಾಜ್ಯಗಳ ವಿಧಾನಸಭೆಗೆ ಮತದಾನ ದಿನಾಂಕಗಳನ್ನು ಘೋಷಿಸಿರುವ ಬೆನ್ನಲ್ಲೇ, ಆಮ್ ಆದ್ಮಿ ಪಕ್ಷವು ಅದಕ್ಕೆ ಆಕ್ಷೇಪವನ್ನೆತ್ತಿದೆ.

ಮೊದಲ ಹಂತದ ಮತದಾನ ಆರಂಭವಾಗುವ ಕೇವಲ ಮೂರು ದಿನ ಮುಂಚೆ ಕೇಂದ್ರ ಸರ್ಕಾರವು ಬಜೆಟ್ ಮಂಡಿಸುವುದು ಚುನಾವಣೆಯ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂದು ಆಪ್ ಪಕ್ಷದ ಮುಖಂಡ ಅಶುತೋಶ್ ರಾಣಾ ಟ್ವೀಟಿಸಿದ್ದಾರೆ.

Scroll to load tweet…
Scroll to load tweet…

ಈ ಹಿಂದೆ, ಪಂಜಾಬ್ ಹಾಗೂ ಗೋವಾ ಚುನಾವಣೆಗಳನ್ನು ಬೇರೆ ಬೇರೆ ದಿನಗಳಲ್ಲಿ ನಡೆಸುವಂತೆ ಆಪ್ ಪಕ್ಷವು ಆಗ್ರಹಿಸಿತ್ತು. ಆದರೆ ಚುನಾವಣಾ ಆಯೋಗವು ಈ ಎರಡು ರಾಜ್ಯಗಳ ಚುನಾವಣೆಗಳನ್ನು ಒಂದೇ ದಿನಕ್ಕೆ (ಫೆ.4) ನಿಗದಿಪಡಿಸಿದೆ.

ಅದಾಗ್ಯೂ ಗೋವಾ ಹಾಗೂ ಪಂಜಾಬ್’ನಲ್ಲಿ ತಮ್ಮ ಪಕ್ಷವು ಗೆಲುವು ಸಾಧಿಸಲಿದೆ ಎಂದು ಪಕ್ಷವು ಹೆಳಿದೆ.