ನಿತೇಶ್ ತಿವಾರಿ ನಿರ್ದೇಶನ ಮಾಡಿರು ದಂಗಲ್ ಸಿನೆಮಾ ಡಿಸೆಂಬರ್-23 ಕ್ಕೆ ತೆರೆಗೆ ಬರಲಿದೆ.

ಮುಂಬೈ (ನ.29): ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್ ಅಭಿನಯದ ಬಹುನಿರೀಕ್ಷೆಯ ಸಿನಿಮಾ ದಂಗಲ್ ಪಾತ್ರಕ್ಕಾಗಿ ದಪ್ಪ ಮತ್ತೆ ಸಣ್ಣ ಆಗಿರೋ ಅಮೀರ್ ಖಾನ್, ಕೆಲ ದಿನಗಳ ಹಿಂದೆ ಖಡಕ್ ಬಾಡಿ ಶೋ ಮಾಡಿರೋ ಫೋಟೋವನ್ನ ರಿವೀಲ್ ಮಾಡಿದ್ರು.

ಈಗ ದಪ್ಪ ಇದ್ದ ಆಮೀರ್ ಖಾನ್ ಸಣ್ಣ ಆಗೋದಿಕ್ಕೆ ಎಷ್ಟು ತಿಂಗಳು ಜಿಮ್ ನಲ್ಲಿ ಬೆವರು ಹರಿಸಿದರು ಎನ್ನುವ ವೀಡಿಯೋ ಮೇಕಿಂಗ್'ನ್ನ ರಿಲೀಸ್ ಮಾಡಿದ್ದಾರೆ. ನಿತೇಶ್ ತಿವಾರಿ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ಡಿಸೆಂಬರ್-23 ಕ್ಕೆ ದಂಗಾಲ್ ಚಿತ್ರ ತೆರೆಗೆ ಬರಲಿದೆ.