ನಟ ಅಮೀರ್‌ ಖಾನ್‌ ಇದೀಗ ತಮ್ಮ ಮುಂದಿನ ಚಿತ್ರ ‘ಥಗ್ಸ್‌ ಆಫ್‌ ಹಿಂದೋಸ್ತಾನ್‌'ಗಾಗಿ ಮೂಗು ಚುಚ್ಚಿಸಿಕೊಂಡು ಗಮನ ಸೆಳೆದಿದ್ದಾರೆ.

ಮುಂಬೈ: ಒಂದೊಂದು ಸಿನಿಮಾಕ್ಕೆ ಒಂದೊಂದು ಅವತಾರ ತಾಳುವ ಖ್ಯಾತ ಬಾಲಿವುಡ್‌ ನಟ ಅಮೀರ್‌ ಖಾನ್‌ ಇದೀಗ ಮೂಗು ಚುಚ್ಚಿಸಿಕೊಂಡಿದ್ದಾರೆ. ಅವರ ಮುಂದಿನ ಚಿತ್ರ ‘ಥಗ್ಸ್‌ ಆಫ್‌ ಹಿಂದೋಸ್ತಾನ್‌'ಗಾಗಿ ಹೀಗೆ ಮಾಡಿದ್ದಾರೆನ್ನಲಾಗಿದೆ. ‘ದಂಗಲ್‌'ನಲ್ಲಿ ದೈಹಿಕ ಮಾರ್ಪಾಟನ್ನು ಪ್ರದರ್ಶಿಸಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದ ನಟ ಅಮೀರ್‌ ಖಾನ್‌, ಇದೀಗ ತಮ್ಮ ಮುಂದಿನ ಚಿತ್ರ ‘ಥಗ್ಸ್‌ ಆಫ್‌ ಹಿಂದೋಸ್ತಾನ್‌'ಗಾಗಿ ಮೂಗು ಚುಚ್ಚಿಸಿಕೊಂಡು ಗಮನ ಸೆಳೆದಿದ್ದಾರೆ. ಯಶ್‌ರಾಜ್‌ ಫಿಲಂಸ್‌ನ ಚಿತ್ರಕ್ಕಾಗಿ ಬಾಲಿವುಡ್‌ನ ಜನಪ್ರಿಯ ನಟ ಅಮೀರ್‌ ಖಾನ್‌ ಮತ್ತು ಹಿರಿಯ ನಟ ಅಮಿತಾಭ್‌ ಬಚ್ಚನ್‌ ಇದೇ ಮೊದಲ ಬಾರಿ ಜೊತೆಯಾಗಿ ನಟಿಸುತ್ತಿದ್ದಾರೆ. ಅಮೀರ್‌ ಮೂಗುತಿ ಧರಿಸಿರುವ ಚಿತ್ರವೊಂದನ್ನು ನಟ ಸುಶಾಂತ್‌ ಸಿಂಗ್‌ ರಜಪೂತ್‌ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.