ಸರ್ಕಾರದ ಸೇವೆಗಳು, ಯೋಜನೆ ಗಳಿಗೆ ಆಧಾರ್ ಕಡ್ಡಾಯ ಮುಂದುವರಿಸಿರುವ ಕೇಂದ್ರ ಸರ್ಕಾರ ಈಗ ಪಿಪಿಎಫ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಹಾಗೂ ಕಿಸಾನ್ ವಿಕಾಸ್ ಪತ್ರಗಳಿಗೆ ಆಧಾರ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ನವದೆಹಲಿ: ಸರ್ಕಾರದ ಸೇವೆಗಳು, ಯೋಜನೆ ಗಳಿಗೆ ಆಧಾರ್ ಕಡ್ಡಾಯ ಮುಂದುವರಿಸಿರುವ ಕೇಂದ್ರ ಸರ್ಕಾರ ಈಗ ಪಿಪಿಎಫ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ (ಎನ್‌ಎಸ್‌ಸಿ) ಹಾಗೂ ಕಿಸಾನ್ ವಿಕಾಸ್ ಪತ್ರಗಳಿಗೆ ಆಧಾರ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಡಿಸೆಂಬರ್ 31ರೊಳಗೆ ಈಗಾಗಲೇ ಈ ಯೋಜನೆಗಳಲ್ಲಿ ಹಣ ತೊಡಗಿಸಿರುವವರು ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು.

ಡಿ.31ರೊಳಗೆ ಈಗಾಗಲೇ ಈ ಯೋಜನೆಗಳಲ್ಲಿ ಹಣ ತೊಡಗಿಸಿರುವವರು ಆಧಾರ್ ಸಂಖ್ಯೆಯನ್ನು ಸಲ್ಲಿಸಬೇಕು ಎಂದು ವಿತ್ತ ಸಚಿವಾಲಯ ಗೆಜೆಟ್ ಅಧಿಸೂಚನೆ ಹೊರಡಿಸಿದೆ.

ಈಗಾಗಲೇ ಆಧಾರ್ ಸಲ್ಲಿಸಿದವರು ಪುನಃ ಸಲ್ಲಿಸಬೇಕಿಲ್ಲ. ಸಾರ್ವಜನಿಕ ಉಳಿತಾಯ, ಎನ್‌ಎಸ್‌ಸಿ ಮತ್ತು ಕಿಸಾನ್ ವಿಕಾಸ್ ಪತ್ರ ಉಳಿತಾಯ ಯೋಜನೆಗಳು ಅಂಚೆ ಕಚೇರಿಯಲ್ಲಿ ಇರುವ ಯೋಜನೆಗಳಾಗಿದ್ದು, ಇನ್ನು ಮುಂದೆ ಹೊಸದಾಗಿ ಇದರಲ್ಲಿ ಹಣ ತೊಡಗಿಸುವವರೂ ಕಡ್ಡಾಯವಾಗಿ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನೀಡಬೇಕಾಗುತ್ತದೆ