ರೈಲ್ವೇ ಟಿಕೆಟ್ ಬುಕಿಂಗ್ ನಲ್ಲಾಗುವ ಮೋಸವನ್ನು ತಡೆಗಟ್ಟಲು ಆಧಾರ್ ಕಾರ್ಡ್ ಆಧಾರಿತ ಆನ್ ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ.
ನವದೆಹಲಿ (ಮಾ.02): ರೈಲ್ವೇ ಟಿಕೆಟ್ ಬುಕಿಂಗ್ ನಲ್ಲಾಗುವ ಮೋಸವನ್ನು ತಡೆಗಟ್ಟಲು ಆಧಾರ್ ಕಾರ್ಡ್ ಆಧಾರಿತ ಆನ್ ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ರೈಲ್ವೇ ಇಲಾಖೆ ಶೀಘ್ರದಲ್ಲಿಯೇ ಪ್ರಾರಂಭಿಸಲಿದೆ.
ಹಿರಿಯ ನಾಗರೀಕರು ಟಿಕೆಟ್ ರಿಯಾಯಿತಿ ತೆಗೆದುಕೊಳ್ಳಲು ಏಪ್ರಿಲ್ 1 ರಿಂದ ಆಧಾರ್ ಕಾರ್ಡ್ ನಂಬರ್ ಕಡ್ಡಾಯವಾಗಲಿದೆ. 3 ತಿಂಗಳ ಪ್ರಯೋಗಾರ್ಥವಾಗಿ ನಡೆಸಲಾಗುತ್ತಿದೆ. ನಕಲಿ ಗುರುತು ಪತ್ರ ನೀಡಿ ನೊಂದಣಿ ಮಾಡುವುದನ್ನು ತಡೆಗಟ್ಟಲು ಐಆರ್ ಸಿಟಿಸಿಯಲ್ಲಿ ಟಿಕೆಟ್ ಬುಕಿಂಗ್ ಗಾಗಿ ಒಂದು ಸಲ ರಿಜಿಸ್ಟರ್ ಮಾಡಲು ಆಧಾರ್ ಸಂಖ್ಯೆ ಅಗತ್ಯ ಎಂದು ಇಲಾಖೆ ಸ್ಪಷ್ಟಪಡಿಸಿದೆ.
2017-18 ನೇ ಸಾಲಿನ ಬ್ಯುಸಿನೆಸ್ ಪ್ಲಾನ್ ಪ್ರಕಾರ, ರೈಲ್ವೇ ಸಚಿವ ಸುರೇಶ್ ಪ್ರಭು, ಆಧಾರ್ ಆಧಾರಿತ ಆನ್ ಲೈನ್ ವ್ಯವಸ್ಥೆಯ ಜೊತೆಗೆ ನಗದು ರಹಿತ ಟಿಕೆಟ್ ವ್ಯವಸ್ಥೆಯನ್ನು ಉತ್ತೇಜಿಸಲು 6,000 ಮಾರಾಟ ಯಂತ್ರ, 1000 ವಿತರಣಾ ಯಂತ್ರವನ್ನು ದೇಶದಾದ್ಯಂತ ಸ್ಥಾಪಿಸುವುದಾಗಿ ಇಂದು ಹೇಳಿದ್ದಾರೆ.
ನಗದು ರಹಿತ ವ್ಯವಹಾರವನ್ನು ಉತ್ತೇಜಿಸಲು ಈ ಆ್ಯಪನ್ನು ಮೇ ನಲ್ಲಿ ಬಿಡುಗಡೆ ಮಾಡುವುದಾಗಿ ರೈಲ್ವೇ ಇಲಾಖೆ ಹೇಳಿದೆ.
