ಪಾನ್‌-ಆಧಾರ್‌ ಸಂಖ್ಯೆ ಜೋಡಣೆ ಗಡುವು ವಿಸ್ತರಣೆ

First Published 28, Mar 2018, 9:08 AM IST
Aadhaar PAN linking deadline to June 30
Highlights

ಪಾನ್‌ ಕಾರ್ಡ್‌ಗಳ ಜತೆಗೆ ಆಧಾರ್‌ ಸಂಯೋಜನೆಗೆ ಇದ್ದ ಇದೇ ಮಾ.31ರ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಜೂನ್‌ 30ರವರೆಗೆ ವಿಸ್ತರಣೆ ಮಾಡಿದೆ.

ನವದೆಹಲಿ: ಪಾನ್‌ ಕಾರ್ಡ್‌ಗಳ ಜತೆಗೆ ಆಧಾರ್‌ ಸಂಯೋಜನೆಗೆ ಇದ್ದ ಇದೇ ಮಾ.31ರ ಗಡುವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಜೂನ್‌ 30ರವರೆಗೆ ವಿಸ್ತರಣೆ ಮಾಡಿದೆ.

ಈ ವಿಚಾರದ ಬಗ್ಗೆ ಪರಿಗಣನೆ ಮಾಡಿದ ಬಳಿಕ ಪಾನ್‌ನೊಂದಿಗಿನ ಆಧಾರ್‌ ಜೋಡಣೆಗೆ ಇರುವ ಗಡುವನ್ನು ಮತ್ತೆ ಮೂರು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ ಎಂದು ಸಿಬಿಡಿಟಿ ಹೇಳಿದೆ.

ಈ ಮೂಲಕ ಪಾನ್‌-ಆಧಾರ್‌ ಜೋಡಣೆ ಯೋಜನೆ ಜಾರಿಯಾದ ಬಳಿಕ ಸಾರ್ವಜನಿಕರು ತಮ್ಮ ಪಾನ್‌ ಸಂಖ್ಯೆಯನ್ನು ಆಧಾರ್‌ ಸಂಖ್ಯೆಯೊಂದಿಗೆ ಸಂಯೋಜನೆ ಮಾಡಲು ಕೇಂದ್ರ ಸರ್ಕಾರ ನಾಲ್ಕನೇ ಬಾರಿಗೆ ಅವಧಿ ವಿಸ್ತರಣೆ ಮಾಡಿದೆ.

loader