ಆಧಾರ್’ ಕಡ್ಡಾಯಗೊಳಿಸುವಿಕೆ ಹಾಗೂ ವ್ಯಕ್ತಿಯ ಖಾಸಗಿತನದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಹೊಸ ಆಧಾರ್ ನಿಯಮವೊಂದು ಜಾರಿಗೆ ಬರಲಿದೆ. ಹೊಸ ನಿಯಮದ ಪ್ರಕಾರ ವ್ಯಕ್ತಿಯ ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ, ಮೃತ ವ್ಯಕ್ತಿಯನ್ನು ಗುರುತಿಸಲು ಇನ್ಮುಂದೆ ಆತನ/ಆಕೆಯ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು, ಎಂದು ಏಎನ್ಐ ವರದಿ ಮಾಡಿದೆ.

ನವದೆಹಲಿ: ಆಧಾರ್’ ಕಡ್ಡಾಯಗೊಳಿಸುವಿಕೆ ಹಾಗೂ ವ್ಯಕ್ತಿಯ ಖಾಸಗಿತನದ ಬಗ್ಗೆ ಚರ್ಚೆಗಳು ನಡೆಯುತ್ತಿರುವ ನಡುವೆಯೇ ಹೊಸ ಆಧಾರ್ ನಿಯಮವೊಂದು ಜಾರಿಗೆ ಬರಲಿದೆ.

ಹೊಸ ನಿಯಮದ ಪ್ರಕಾರ ವ್ಯಕ್ತಿಯ ಮರಣ ಪ್ರಮಾಣ ಪತ್ರ ಪಡೆಯಬೇಕಾದರೆ, ಮೃತ ವ್ಯಕ್ತಿಯನ್ನು ಗುರುತಿಸಲು ಇನ್ಮುಂದೆ ಆತನ/ಆಕೆಯ ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು, ಎಂದು ಏಎನ್ಐ ವರದಿ ಮಾಡಿದೆ.

ಮುಂಬರುವ ಅಕ್ಟೋಬರ್ 1ರಿಂದ ನಿಯಮವು ದೇಶಾದ್ಯಂತ ಜಾರಿಯಾಗಲಿದೆ ಎನ್ನಲಾಗಿದೆ.

ಈ ಹಿಂದೆ ಸರ್ಕಾರವು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಕಾರ್ಡನ್ನು ಕಡ್ಡಾಯಗೊಳಿಸಿತ್ತು. ಅದೇ ರೀತಿ ಜು. 1 ರಿಂದ ಪ್ಯಾನ್ ಪ್ಯಾನ್ ಕಾರ್ಡ್’ಗೆ ಆಧಾರ್ ಕಾರ್ಡ್ ಲಿಂಕ್ ಮಾಡವುದು ಕಡ್ಡಾಯಗೊಳಿಸಿದೆ.

ಆಧಾರ್’ಗೆ ಸಂಬಂಧಿಸಿದಂತೆ ವ್ಯಕ್ತಿಯ ಖಾಸಗಿತನದ ಹಕ್ಕು ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬ ಬಗ್ಗೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದೆ.