ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಪರ್ಯಾಯ ದಾಖಲೆಗಳಾದ ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಇತರೆ ಗುರುತಿನ ಚೀಟಿ ಸ್ವೀಕರಿಸಲು ಕೇಂದ್ರ ಸರ್ಕಾರ, ದೂರ ಸಂಪರ್ಕ ಕಂಪನಿಗಳಿಗೆ ನಿರ್ದೇಶಿಸಿದೆ. 

ನವದೆಹಲಿ: ಮೊಬೈಲ್ ಸಿಮ್ ಪಡೆಯಲು ಆಧಾರ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಪಡಿಸಿದೆ. ಪರ್ಯಾಯ ದಾಖಲೆಗಳಾದ ವಾಹನ ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಇತರೆ ಗುರುತಿನ ಚೀಟಿ ಸ್ವೀಕರಿಸಲು ಕೇಂದ್ರ ಸರ್ಕಾರ, ದೂರ ಸಂಪರ್ಕ ಕಂಪನಿಗಳಿಗೆ ನಿರ್ದೇಶಿಸಿದೆ. 

ಈ ಮುನ್ನ ಗ್ರಾಹಕರ ಕಡ್ಡಾಯ ದೃಢೀಕರಣಕ್ಕೆ ಟೆಲಿ ಕಾಂ ಕಂಪನಿಗಳು ಮೊಬೈಲ್ ನಂಬರ್ ಜೊತೆ ಆಧಾರ್ ಲಿಂಕ್ ಮಾಡಲು ಸೂಚಿಸಿದ್ದಕ್ಕೆ ಸುಪ್ರೀಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು.

ಅಂತಿಮ ಆದೇಶ ಹೊರಬೀಳುವವ ರೆಗೂ ಸಿಮ್‌ಗೆ ಆಧಾರ್ ಸಂಯೋಜನೆ ಕಡ್ಡಾಯವಲ್ಲ ಎಂದು ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದೆ.