ಹೊಸ ಬ್ಯಾಂಕ್‌ ಖಾತೆ, ಪಾಸ್ಪೋರ್ಟ್‌ಗೆ ಆಧಾರ್‌ ಅಗತ್ಯ:ಯುಐಡಿಎಐ

First Published 15, Mar 2018, 10:52 AM IST
Aadhaar must for opening bank account tatkal passport
Highlights

ಬ್ಯಾಂಕ್‌ ಖಾತೆಗಳು ಮತ್ತು ಪಾನ್‌ ನಂಬರ್‌ಗೆ ಆಧಾರ್‌ ಸಂಯೋಜನೆ ಗಡುವನ್ನು ಸುಪ್ರೀಂಕೋರ್ಟ್‌ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಲ್ಲೇ, ಹೊಸ ಬ್ಯಾಂಕ್‌ ಖಾತೆ ತೆರೆಯಲು ಅಥವಾ ತತ್ಕಾಲ್‌ ಪಾಸ್ಪೋರ್ಟ್‌ಗಳಿಗೆ ಆಧಾರ್‌ ಸಲ್ಲಿಕೆ ಮುಂದುವರಿಯಲಿದೆ ಎಂದು ಭಾರತೀಯ ವಿಶಿಷ್ಟಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ನವದೆಹಲಿ: ಬ್ಯಾಂಕ್‌ ಖಾತೆಗಳು ಮತ್ತು ಪಾನ್‌ ನಂಬರ್‌ಗೆ ಆಧಾರ್‌ ಸಂಯೋಜನೆ ಗಡುವನ್ನು ಸುಪ್ರೀಂಕೋರ್ಟ್‌ ಅನಿರ್ದಿಷ್ಟಾವಧಿಗೆ ವಿಸ್ತರಿಸಿದ ಬೆನ್ನಲ್ಲೇ, ಹೊಸ ಬ್ಯಾಂಕ್‌ ಖಾತೆ ತೆರೆಯಲು ಅಥವಾ ತತ್ಕಾಲ್‌ ಪಾಸ್ಪೋರ್ಟ್‌ಗಳಿಗೆ ಆಧಾರ್‌ ಸಲ್ಲಿಕೆ ಮುಂದುವರಿಯಲಿದೆ ಎಂದು ಭಾರತೀಯ ವಿಶಿಷ್ಟಗುರುತಿನ ಪ್ರಾಧಿಕಾರ (ಯುಐಡಿಎಐ) ತಿಳಿಸಿದೆ.

ಸುಪ್ರೀಂಕೋರ್ಟ್‌ ಮಂಗಳವಾರ ನೀಡಿದ ಆದೇಶದ ಪ್ರಕಾರ, ಹೊಸ ಬ್ಯಾಂಕ್‌ ಖಾತೆಗಳನ್ನು ತೆರೆಯಲು ಮತ್ತು ತತ್ಕಾಲ್‌ ಪಾಸ್ಪೋರ್ಟ್‌ಗಳಿಗೆ ಆಧಾರ್‌ ಸಲ್ಲಿಕೆಯನ್ನು ಮುಂದುವರಿಸಲಾಗಿದೆ ಎಂದು ಯುಐಡಿಎಐ ಟ್ವೀಟ್‌ ಮಾಡಿದೆ. ಒಂದು ವೇಳೆ ಆಧಾರ್‌ ಇಲ್ಲದವರು ಆಧಾರ್‌ಗೆ ಅರ್ಜಿ ಸಲ್ಲಿಸಿ ಅರ್ಜಿಯ ನಂಬರ್‌ ಸಲ್ಲಿಸಬೇಕು ಎಂದು ತಿಳಿಸಿದೆ.

loader