ಮುಂದಿನ ವಾರ ಸಂವಿದಾನ ಪೀಠ ಆದಾರ್'ನ ವಿವಿಧ ಯೋಜನೆಯ ಜೋಡಣೆ ಬೇಕೆ ಎನ್ನುವುದರ ಬಗ್ಗೆ ವಿಚಾರಣೆ ನಡೆಸಲಿದೆ.
ನವದೆಹಲಿ(ಡಿ.07): ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಜೋಡಣೆ ಕಡ್ಡಾಯದ ಕೊನೆಯ ದಿನಾಂಕವನ್ನು ಮಾರ್ಚ್ 31, 2018ರವರೆಗೂ ವಿಸ್ತರಿಸಲಾಗುವುದಾಗಿ ಸುಪ್ರಿಂ ಕೋರ್ಟ್'ಗೆ ಕೆಂದ್ರ ಸರ್ಕಾರ ತಿಳಿಸಿದೆ.
ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮುಖ್ಯಸ್ಥತೆಯ ಪೀಠಕ್ಕೆ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಮಾಹಿತಿ ನೀಡಿದರು. ಆದಾಗ್ಯೂ, ಮುಂದಿನ ವರ್ಷದ ಫೆಬ್ರವರಿ 6 ರಂದು ಮೊಬೈಲ್ ಜೋಡಣೆಯ ಗಡುವು ಹಾಗೆ ಉಳಿದುಕೊಂಡಿದೆ ಎಂದು ಅಟಾರ್ನಿ ಜನರಲ್ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಹಾಜರಾಗಿ ಆಧಾರ್ ಯೋಜನೆಯನ್ನು ವಿರೋಧ ವ್ಯಕ್ತಪಡಿಸುವವರ ಬಗ್ಗೆ ಮಾಹಿತಿ ನಿಡಿದರು.
ಮುಂದಿನ ವಾರ ಸಂವಿದಾನ ಪೀಠ ಆದಾರ್'ನ ವಿವಿಧ ಯೋಜನೆಯ ಜೋಡಣೆ ಬೇಕೆ ಎನ್ನುವುದರ ಬಗ್ಗೆ ವಿಚಾರಣೆ ನಡೆಸಲಿದೆ. ಅಕ್ಟೋಬರ್ 30ರಂದು ನಡೆದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠಕ್ಕೆ ವರ್ಗಾಯಿಸಿತ್ತು. ವಿವಿಧ ಸಂಘಟನೆಗಳು ಆದಾರ್ ಜೋಡಣೆಯಿಂದ ಖಾಸಗಿ ಹಕ್ಕುಗಳಿಗೆ ಧಕ್ಕೆಯಾಗುತ್ತದೆ ಎಂದು ಸುಪ್ರೀಂ ಮೆಟ್ಟಿಲೇರಿದ್ದವು.
