ನಕಲಿ ಲೈಸೆನ್ಸ್‌ಗಳನ್ನು ತಡೆಗಟ್ಟಲು ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ) ಅನ್ನು ಆಧಾರ್ ನಂಬರ್ ಜೊತೆ ಸಂಯೋಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸು ತ್ತಿದೆ.

ನವದೆಹಲಿ: ನಕಲಿ ಲೈಸೆನ್ಸ್‌ಗಳನ್ನು ತಡೆಗಟ್ಟಲು ಡ್ರೈವಿಂಗ್ ಲೈಸೆನ್ಸ್ (ಚಾಲನಾ ಪರವಾನಗಿ) ಅನ್ನು ಆಧಾರ್ ನಂಬರ್ ಜೊತೆ ಸಂಯೋಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯನಿರ್ವಹಿಸು ತ್ತಿದೆ. ಅಲ್ಲದೇ ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳನ್ನೂ ಒಳಗೊಂಡ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್‌ಗೆ ಬುಧವಾರ ತಿಳಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಕೋರ್ಟ್ ನೇಮಿಸಿದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ನ್ಯಾ. ಕೆ. ಎಸ್. ರಾಧಾಕೃಷ್ಣನ್ ಅವರ ಸಮಿತಿಯು ಸುಪ್ರೀಂಕೋರ್ಟ್‌ಗೆ ಈ ಮಾಹಿತಿ ನೀಡಿದೆ. ಯಾರು ಕೂಡ ನಕಲಿ ಪರವಾನಗಿ ಪಡೆದುಕೊಳ್ಳಲು ಸಾಧ್ಯವೇ ಇಲ್ಲ ಎಂದು ಸಮಿತಿ ಹೇಳಿದೆ.