ಈಗಾಗಲೇ ಒಂದು ಬಿಲಿಯನ್'ಗೂ ಹೆಚ್ಚು ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆಂದು ಇನ್ಫೋಸಿಸ್'ನ ಕಾರ್ಯ ನಿರ್ವಕೇತರ ಮುಖ್ಯಸ್ಥ ನಿಲೇಕಣಿ ಸಂತಸ ವ್ಯಕ್ತಪಡಿಸಿದ್ದಾರೆ.

ವಾಷಿಂಗ್ಟನ್(ಅ.13): ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಧಾರ್'ನಿಂದಾಗಿ ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿಗಳು ಉಳಿತಾಯವಾಗಿದೆ ಎಂದು ಆಧಾರ್ ಕಾರ್ಡ್ ರೂವಾರಿ ನಂದನ್ ನೀಲೆಕಣಿ ಅಭಿಪ್ರಾಯಪಟ್ಟಿದ್ದಾರೆ.

ಸಾಕಷ್ಟು ಮಂದಿ ಸರ್ಕಾರಕ್ಕೆ ವಂಚನೆ ಮಾಡುವ ಮೂಲಕ ಹಲವಾರು ಸೌಲಭ್ಯಗಳನ್ನು ಪಡೆಯುತ್ತಿದ್ದುದನ್ನು ತಡೆಹಿಡಿಯುವ ಮೂಲಕ ಬೊಕ್ಕಸಕ್ಕೆ 58,422 ಕೋಟಿ ರುಪಾಯಿ ಉಳಿಸಲು ಸಹಾಯಕವಾಗಿದೆ ಎಂದು ನಂದನ್ ನೀಲೆಕಣಿ ಹೇಳಿದ್ದಾರೆ.

ಯುಪಿಎ-2 ಅವಧಿಯಲ್ಲಿ ಜಾರಿಯಾದ ಆಧಾರ್ ಯೋಜನೆಗೆ ಪ್ರಸ್ತುತ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಈಗಾಗಲೇ ಒಂದು ಬಿಲಿಯನ್'ಗೂ ಹೆಚ್ಚು ಮಂದಿ ಆಧಾರ್ ಕಾರ್ಡ್ ಹೊಂದಿದ್ದಾರೆಂದು ಇನ್ಫೋಸಿಸ್'ನ ಕಾರ್ಯ ನಿರ್ವಕೇತರ ಮುಖ್ಯಸ್ಥ ನಿಲೇಕಣಿ ಸಂತಸ ವ್ಯಕ್ತಪಡಿಸಿದ್ದಾರೆ.