ಆದರೆ ಬ್ಯಾಂಕು ಖಾತೆಗಳನ್ನು ತೆರೆಯಲು ಕಡ್ಡಾಯಗೊಳಿಸುವುದರಿಮದ ಸರ್ಕಾರವನ್ನು ತಡೆಯುವಂತಿಲ್ಲ ದು ಸುಪ್ರೀಂ ಹೇಳಿದೆಯೆಂದು ಪಿಟಿಐ ವರದಿ ಮಾಡಿದೆ.

ನವದೆಹಲಿ (ಮಾ.27): ಸರ್ಕಾರದ ಕಲ್ಯಾಣ ಯೋಜನೆಗಳ ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡನ್ನು ಕಡ್ಡಾಯ ಮಾಡುವಂತಿಲ್ಲವೆಂದು ಸುಪ್ರೀಂ ಕೋರ್ಟ್ ಇಂದು ಹೇಳಿದೆ.

ಆದರೆ ಬ್ಯಾಂಕು ಖಾತೆಗಳನ್ನು ತೆರೆಯಲು ಕಡ್ಡಾಯಗೊಳಿಸುವುದರಿಮದ ಸರ್ಕಾರವನ್ನು ತಡೆಯುವಂತಿಲ್ಲವೆಂದು ಸುಪ್ರೀಂ ಹೇಳಿದೆಯೆಂದು ಪಿಟಿಐ ವರದಿ ಮಾಡಿದೆ.

ಆಧಾರ್’ನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಗೆ 7 ಸದಸ್ಯ ಪೀಠವನ್ನು ರಚಿಸುವ ಅಗತ್ಯವಿದೆಯೆಂದು ಹೇಳಿರುವ ಸುಪ್ರೀಂ, ತಕ್ಷಣಕ್ಕೆ ಅದು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದೆ.

ಆಧಾರ್ ಹೊಂದಿಲ್ಲದ ಕಾರಣಕ್ಕಾಗಿ ಯಾರನ್ನು ಸೌಲಭ್ಯವಂಚಿತರಾಗಿ ಮಾಡುವುದಿಲ್ಲವೆಂದು ಸರ್ಕಾರಸಂದರ್ಭದಲ್ಲಿ ಪುನರುಚ್ಚರಿಸಿದೆ.

ವ್ಯಕ್ತಿಯು ಆಧಾರ್ ಹೊಂದುವವರೆಗೆ ಪರ್ಯಾಯ ದಾಖಲೆಗಳನ್ನು ಸಲಲಿಸಿ ಆ ಸೌಲಭ್ಯಗಳನ್ನು ಪಡೆಯಬಹುದಾಗಿ ಸರ್ಕಾರ ಹೇಳಿದೆ.

ಆಧಾರ್ ಪ್ರಾಧಿಕಾರವು ಖಾಸಗಿ ಸಂಸ್ಥೆಗಳ ಮೂಲಕ ಜನರ ಬಯೋಮೆಟ್ರಿಕ್ ವಿವರಗಳನ್ನು ಪಡೆಯುವುದರಿಂದ, ವ್ಯಕ್ತಿಯ ಮೂಲಭೂತ ಹಕ್ಕುಗಳ ಉಲ್ಲಂಘಿಸಿದಂತಾಗುತ್ತದೆಯೆಂದು ನಾಗರಿಕ ಗುಂಪುಗಳು ಆಕ್ಷೇಪವೆತ್ತಿವೆ.