ಭಾರತೀಯ ಆಧಾರ್ ಸಂಸ್ಥೆ ಅಧಿಕೃತವಾಗಿ ಬಿಡುಗಡೆ ಮಾಡಿರುವ, ವೆಬ್ಸೈಟ್ ಬದಲಾಗಿ quartz technologies ಸಂಸ್ಥೆ, ತನ್ನ ಈಕೆವೈಎಸ್ಪಿ ಎಂಬ ಆಪ್ ಅನ್ನ ಬಿಡುಗಡೆ ಮಾಡಿದೆ.
ಬೆಂಗಳೂರು(ಜು.27): ಈಗ ಯಾವುದೇ ವ್ಯವಹಾರ ಮಾಡಲಿ, ಯಾವುದೇ ಕೆಲಸ ಮಾಡಲಿ ಆಧಾರ್ ಕಡ್ಡಾಯ, ಅನ್ನೋದು ಎಲ್ಲರಿಗೂ ಗೋತ್ತಿದೆ. ದೇಶದ ಐಕ್ಯತೆ ಮತ್ತು ನಾಗರೀಕರ ಭದ್ರತೆಗಾಗಿ, ಭಾರತ ಸರ್ಕಾರ ರೂಪಿಸಿದ ಆಧಾರ್ ದುರ್ಬಳಕೆ ಆಗ್ತಾ ಇದೀಯಾ..? ಅನ್ನುವ ಅನುಮಾನ ಈಗ ಮುಡ್ತಾ ಇದೆ. ಯಾಕಂದರೆ, ಆಧಾರ್ ಸಂಸ್ಥೆಯ ಉಪನಿರ್ದೇಶಕ ಅಶೋಕ್ ಲೆನಿನ್ ಎಂಬ ಆಧಾರ್ ದುರ್ಬಳಕೆ ಆಗ್ತಾ ಇದೆ ಅಂತಾ ಬೆಂಗಳೂರಿನ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕ್ವಾರ್ತ್ ಟೆಕ್ನಾ'ಲಾಜೀಸ್ (quarth technologies) ಎಂಬ ಕಂಪನಿಯ ವಿರುದ್ಧ ಅಶೋಕ್ ಲೆನಿನ್ ಎಂಬುವವರು ದೂರು ಕೊಟ್ಟಿದ್ದಾರೆ. ಭಾರತೀಯ ಆಧಾರ್ ಸಂಸ್ಥೆ ಅಧಿಕೃತವಾಗಿ ಬಿಡುಗಡೆ ಮಾಡಿರುವ, ವೆಬ್ಸೈಟ್ ಬದಲಾಗಿ quartz technologies ಸಂಸ್ಥೆ, ತನ್ನ ಈಕೆವೈಎಸ್ಪಿ ಎಂಬ ಆಪ್ ಅನ್ನ ಬಿಡುಗಡೆ ಮಾಡಿದೆ. ಎಲ್ಲಾ ಸ್ಮಾರ್ಟ್ ಮೊಬೈಲ್ಗಳ ಪ್ಲೇ ಸ್ಟೋರ್ಗಳಲ್ಲಿ ಆಧಾರ್ ಆಪ್ ಡೌನ್ ಡೌನ್ಲೋಡ್ ಮಾಡಿಕೊಳ್ಳುವ ಸಾರ್ವಜನಿಕರು, ಈ ಆ್ಯಪ್ ಡೌನ್'ಲೋಡ್ ಮಾಡಿಕೊಂಡು ತಮ್ಮ ಸ್ವವಿವರಗಳನ್ನು ಈ ವೆಬ್ಸೈಟ್ ಜೊತೆ ಹಂಚಿಕೊಳ್ಳುತ್ತಾರೆ. ಹೀಗೆ ಸಂಸ್ಥೆ, ಅನಧಿಕೃತವಾಗಿ ಸಾರ್ವಜನಿಕರ ಮಾಹಿತಿ ಸಂಗ್ರಹಣೆಗೆ ಮುಂದಾಗಿರುವುದು, ಆಘಾತಕಾರಿಯಾಗಿದೆ.
ಪ್ಲೇ ಸ್ಟೋರ್ ನಿಂದ ಯಾರು ಆಪ್ ಮಾಡಿಕೊಂಡು ಸಾರ್ವಜನಿಕರು ಮಾಹಿತಿ ಹಂಚಿಕೊಂಡಿದ್ದಾರೆಯೇ ಅವರಿಗೆ ಮಾತ್ರ ತೊಂದರೆ ಆಗುತ್ತದೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದೇಶಧ ಭದ್ರತೆಗಾಗಿ ಇರುವ ಸಾರ್ವಜನಿಕರ ಗುರುತನ್ನು ಕೂಡಾ ಕದಿಯುತ್ತಾರೆ ಅಂದರೆ, ಇದಕ್ಕಿಂದ ದುರಂತ ಮತ್ತೊಂದಿಲ್ಲ. ಸದ್ಯ ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ...!!!
- ತಿಮ್ಮೆಗೌಡ, ಸುವರ್ಣ ನ್ಯೂಸ್
