ಸವಿತಾ ಸಾವಿಗೆ ಕಾರಣವಾಗಿದ್ದ ಕಾನೂನು ರದ್ದು

news | Sunday, May 27th, 2018
Suvarna Web Desk
Highlights

6 ವರ್ಷಗಳ ಹಿಂದೆ ಕನ್ನಡತಿ ಸವಿತಾ ಹಾಲಪ್ಪನವರ್ ಸಾವನ್ನಪ್ಪಲು ಕಾರಣವಾಗಿದ್ದ, ಗರ್ಭಪಾತಕ್ಕೆ ಅನುಮತಿ  ನಿರಾಕರಿ ಸುವ  ಐರ್ಲೆಂಡ್ ನ ವಿವಾದಿತ ಕಾನೂನು ರದ್ದಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಈ ಮಾರಕ ಕಾನೂನಿನ ವಿರುದ್ಧ ಐರ‌್ಲೆಂಡ್ ನಲ್ಲಿ ನಡೆದ ಐತಿಹಾಸಿಕ ಜನಮತಗಣನೆಯಲ್ಲಿ ಶೇ.66.4ಕ್ಕೂ ಹೆಚ್ಚು ಜನ, ಸವಿತಾ ಸಾವಿಗೆ ಕಾರಣವಾದ ಕಾನೂನು ರದ್ದುಪಡಿಸಲು ಬೆಂಬಲ ವ್ಯಕ್ತಪಡಿಸಿದ್ದಾರೆ.

ಲಂಡನ್: 6 ವರ್ಷಗಳ ಹಿಂದೆ ಕನ್ನಡತಿ ಸವಿತಾ ಹಾಲಪ್ಪನವರ್ ಸಾವನ್ನಪ್ಪಲು ಕಾರಣವಾಗಿದ್ದ, ಗರ್ಭಪಾತಕ್ಕೆ ಅನುಮತಿ  ನಿರಾಕರಿ ಸುವ  ಐರ್ಲೆಂಡ್ ನ ವಿವಾದಿತ ಕಾನೂನು ರದ್ದಾಗುವ ಕ್ಷಣ ಕೊನೆಗೂ ಸನ್ನಿಹಿತವಾಗಿದೆ. ಈ ಮಾರಕ ಕಾನೂನಿನ ವಿರುದ್ಧ ಐರ‌್ಲೆಂಡ್ ನಲ್ಲಿ ನಡೆದ ಐತಿಹಾಸಿಕ ಜನಮತಗಣನೆಯಲ್ಲಿ ಶೇ.66.4ಕ್ಕೂ ಹೆಚ್ಚು ಜನ, ಸವಿತಾ ಸಾವಿಗೆ ಕಾರಣವಾದ ಕಾನೂನು ರದ್ದುಪಡಿಸಲು ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದೊಂದಿಗೆ ಈ ಮಾರಕ ಕಾನೂನಿನ ವಿರುದ್ಧ ಇತ್ತೀಚಿನ ದಿನಗಳಲ್ಲಿ ಐರ‌್ಲೆಂಡ್‌ನಲ್ಲಿ ದೊಡ್ಡಮಟ್ಟದಲ್ಲಿ ಬೀದಿಗೆ ಇಳಿದಿದ್ದ ‘ರೋಸಾ’ ಸಂಘಟನೆಯ ‘ಯಸ್’ ಎಂಬ ಆಂದೋಲನಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಶುಕ್ರವಾರ ನಡೆದ ಜನಮತಗಣನೆಯ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು ಅದನ್ನು ಭಾರತೀಯ ಮೂಲದ ಐರ‌್ಲೆಂಡ್ ಪ್ರಧಾನಿ ಲಿಯೋ ವರ್ಧಾಕರ್ ಸ್ವಾಗತಿಸಿದ್ದಾರೆ. ‘ಜನ ತಮ್ಮ ಅಭಿಪ್ರಾಯ ವ್ಯಕ್ತಪಡಿ ಸಿದ್ದಾರೆ.

ಆಧುನಿಕ ದೇಶಕ್ಕೆ ಆಧುನಿಕ ಸಂವಿಧಾನದ ಅಗತ್ಯವಿದೆ ಎಂಬುದನ್ನು ಅವರ ಅಭಿಪ್ರಾಯ ಹೇಳಿದೆ’ ಎಂದು ಲಿಯೋ ಹೇಳಿದ್ದಾರೆ. ಇದರೊಂದಿಗೆ ತಾಯಿಯ ಹೊಟ್ಟೆಯಲ್ಲಿ ಭ್ರೂಣ ಜೀವಂತ ಸ್ಥಿತಿಯಲ್ಲಿದ್ದರೂ, ತಾಯಿಯ ಆರೋಗ್ಯಕ್ಕೆ ತೊಂದರೆ ಇದ್ದರೆ, ಅಂಥ ಸ್ಥಿತಿಯಲ್ಲಿ ಆಕೆಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶ ಮುಂದಿನ ದಿನಗಳಲ್ಲಿ ಸಿಗಲಿದೆ. 

ನಮ್ಮ ಮಗಳ ಸಾವಿನ ನಂತರದ ಐದು ವರ್ಷಗಳ ಹೋರಾಟ ಸಂಕಟಮಯವಾಗಿತ್ತು. ಈ ಹೋರಾಟಕ್ಕೆ ಅಲ್ಲಿನ ಜನ ನೀಡಿದ ಬೆಂಬಲ ಮರೆಯಲಾಗದು. ಮಾನವೀಯ ನೆಲೆಗಟ್ಟಿನಲ್ಲಿ ಗರ್ಭಪಾತಕ್ಕೆ ಅವಕಾಶ ನೀಡುವ ಆಗ್ರಹವನ್ನು ಅಲ್ಲಿನ ಪ್ರಧಾನಿ ಜನಮತಕ್ಕೆ ಇಟ್ಟಿದ್ದು, ಅದಕ್ಕೆ ಶೇ.74ರಷ್ಟು ಮಂದಿಯಿಂದ ಬೆಂಬಲ ಸಿಕ್ಕಿದ್ದು ಸಂತಸ ತಂದಿದೆ. ಐದು ವರ್ಷಗಳ ಹೋರಾಟಕ್ಕೆ ಗೆಲುವು ಸಿಕ್ಕಿದೆ ಎಂದು ದಿ.ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ ಹೇಳಿದ್ದಾರೆ.

Comments 0
Add Comment

  Related Posts

  Rail Roko in Mumbai

  video | Tuesday, March 20th, 2018

  Hassan Braveheart Chandru Laid To Rest

  video | Thursday, March 15th, 2018

  Woman carries her husband on her back as they were not given wheel chair

  video | Wednesday, April 4th, 2018
  Sujatha NR