ನಾವು ಸಕ್ಕರೆ, ಸೀಮೆಎಣ್ಣೆ, ಹಾಗೂ ಗೋಧಿ ಪಡೆಯಲು ಕ್ಯೂ ನಿಂತಿದ್ದೇವೆ. 60 ವರ್ಷ ನಮ್ಮನ್ನಾಳಿದವರಿಗೆ ಧನ್ಯವಾದಗಳು. ಈ ದೇಶ ಕ್ಯೂಗಳಲ್ಲಿ ಸಾಕಷ್ಟು ಸಮಯ ವ್ಯರ್ಥ ಮಾಡಿದೆ. ನಾನು ಮಾಡಿರುವ ಕೆಲಸದಿಂದ ಪ್ರಾರಂಭವಾಗಿರುವ ನೋಟು ನಿಷೇಧ ಕ್ಯೂ ಈ ಎಲ್ಲಾ ಕ್ಯೂಗಳಿಗೆ ಅಂತ್ಯ ಹಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ನವದೆಹಲಿ (ಡಿ.03): 500 ಹಾಗೂ 1000 ರೂ ನೋಟುಗಳ ಅಮಾನ್ಯ ಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಮೊರಾದಾಬಾದ್ ರ್ಯಾಲಿಯಲ್ಲಿ ಸಮರ್ಥಿಸಿಕೊಂಡಿದ್ದಾರೆ.

ತಾವು ತೆಗೆದುಕೊಂಡ ಈ ಕ್ರಮದಿಂದಾಗಿ ಕಾಳಧನಿಕರಿಗೆ ಬಿಸಿ ಮುಟ್ಟಿಸಿದಂತಾಗಿದೆ ಎಂದಿದ್ದಾರೆ.

ನಾವು ಸಕ್ಕರೆ, ಸೀಮೆಎಣ್ಣೆ, ಹಾಗೂ ಗೋಧಿ ಪಡೆಯಲು ಕ್ಯೂ ನಿಂತಿದ್ದೇವೆ. 60 ವರ್ಷ ನಮ್ಮನ್ನಾಳಿದವರಿಗೆ ಧನ್ಯವಾದಗಳು. ಈ ದೇಶ ಕ್ಯೂಗಳಲ್ಲಿ ಸಾಕಷ್ಟು ಸಮಯ ವ್ಯರ್ಥ ಮಾಡಿದೆ. ನಾನು ಮಾಡಿರುವ ಕೆಲಸದಿಂದ ಪ್ರಾರಂಭವಾಗಿರುವ ನೋಟು ನಿಷೇಧ ಕ್ಯೂ ಈ ಎಲ್ಲಾ ಕ್ಯೂಗಳಿಗೆ ಅಂತ್ಯ ಹಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ದೇಶ ಭ್ರಷ್ಟಾಚಾರದಿಂದ ಹೈರಾಣಾಗಿಲ್ಲವೇ? ಭ್ರಷ್ಟಾಚಾರ ತನ್ನಿಂದ ತಾನೇ ನಿರ್ಮೂಲನೆ ಆಗುವುದೇ? ಇದನ್ನು ಹೋಗಲಾಡಿಸುವ ಅಗತ್ಯವಿಲ್ಲವೇ?ಎಂದು ಜನರನ್ನುದ್ದೇಶಿಸಿ ಮೋದಿ ಕೇಳಿದ ಪ್ರಶ್ನೆಗೆ ಜನರು ಹೌದು ಹೌದು ಎಂದು ಪ್ರತಿಕ್ರಿಯೆ ನೀಡಿದರು.