ಡಾಂಬರ್ ಕಾಣದ ರಸ್ತೆ, ದೇವರಿಗೆ ಪ್ರೀತಿ ಗರ್ಭಿಣಿ ಅವಸ್ಥೆಆಂಧ್ರದ ವಿಶಾಖಪಟ್ಟಣದ ಸಮೀಪದ ಹಳ್ಳಿಸಮಯಕ್ಕೆ ಆ್ಯಂಬುಲೆನ್ಸ್ ಬರದೇ ಪರದಾಟಗರ್ಭಿಣಿಯನ್ನು ಹಾಸಿಗೆ ಮೇಲೆ ಹೊತ್ತೊಯ್ದ ಗ್ರಾಮಸ್ಥರು 

ವಿಶಾಖಪಟ್ಟಣ(ಜೂ.9): ರಸ್ತೆ ಸರಿಯಿಲ್ಲದ ಕಾರಣ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ತಲುಪದೆ, ಗರ್ಭಿಣಿ ಮನೆಯವರು ಹಾಸಿಗೆಯಲ್ಲಿ ಹೊತ್ತು ಆಸ್ಪತ್ರೆಗೆ ಸಾಗಿಸಿದ ಘಟನೆ ವಿಶಾಖಪಟ್ಟಣದ ಬಳಿಯ ಹಳ್ಳಿಯೊಂದರಲ್ಲಿ ನಡೆದಿದೆ.

ಇಲ್ಲಿನ ಅನುಕು ಎಂಬ ಗ್ರಾಮದಲ್ಲಿ ಗರ್ಭಿಣಿ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಕುಟುಂಬಸ್ಥರು ಜಿಲ್ಲಾಸ್ಪತ್ರೆಯ ಆ್ಯಂಬುಲೆನ್ಸ್ ಗೆ ಫೋನ್ ಮಾಡಿದ್ದಾರೆ. ಆದರೆ ಅನುಕು ಗ್ರಾಮಕ್ಕೆ ತಲುಪಲು ರಸ್ತೆ ಮಾರ್ಗ ಸರಿಯಿಲ್ಲದ ಕಾರಣ, ಆ್ಯಂಬುಲೆನ್ಸ್ ಸರಿಯಾದ ಸಮಯಕ್ಕೆ ಗ್ರಾಮಕ್ಕೆ ತಲುಪಲು ಸಾಧ್ಯವಾಗಿಲ್ಲ.

Scroll to load tweet…

ಇನ್ನು ಹೆರಿಗೆ ನೋವು ಹೆಚ್ಚಾದಾಗ ಮನೆಯವರು ಮಹಿಳೆಯನ್ನು ಹಾಸಿಗೆ ಮೇಲೆ ಕೂರಿಸಿ ಅದಕ್ಕೆ ಕಟ್ಟಿಗೆ ಕಟ್ಟಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ರಸ್ತೆ ಮಾರ್ಗವನ್ನು ದುರಸ್ತಿಗೊಳಿಸುವಂತೆ ಬಹಳ ಹಿಂದೆಯೇ ಮನವಿ ಸಲ್ಲಿಸಲಾಗಿತ್ತಾದರೂ, ಈ ಕುರಿತು ಸ್ಥಳೀಯ ಆಡಳಿತ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.