ನನ್ನ ಹತ್ಯೆಗೆ ರಾಜಕೀಯ ಪಕ್ಷವೊಂದರಿಂದ ಸುಪಾರಿ : ಮಮತಾ ಆರೋಪ

A political party has hired contract killers to murder me Says Mamata
Highlights

 ರಾಜಕೀಯ ಪಕ್ಷವೊಂದು ತಮ್ಮ ಹತ್ಯೆಗೆ ಸುಪಾರಿ ನೀಡಿದೆ ಎಂಬ ಗಂಭೀರ ಆರೋಪವನ್ನು ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದಾರೆ. ‘ನಿರ್ದಿಷ್ಟ ಪಕ್ಷವೊಂದು ನನ್ನನ್ನು ಕೊಲ್ಲಲು ಸುಪಾರಿ (ಗುತ್ತಿಗೆ) ನೀಡಿದೆ ಎಂದು ಆರೋಪ ಮಾಡಿದ್ದಾರೆ.

ಕೊಲ್ಕತಾ: ರಾಜಕೀಯ ಪಕ್ಷವೊಂದು ತಮ್ಮ ಹತ್ಯೆಗೆ ಸುಪಾರಿ ನೀಡಿದೆ ಎಂಬ ಗಂಭೀರ ಆರೋಪವನ್ನು ಪಶ್ಚಿಮ ಬಂಗಾಳ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಮಾಡಿದ್ದಾರೆ. ‘ನಿರ್ದಿಷ್ಟ ಪಕ್ಷವೊಂದು ನನ್ನನ್ನು ಕೊಲ್ಲಲು ಸುಪಾರಿ (ಗುತ್ತಿಗೆ) ನೀಡಿದೆ ಎಂದು ಆರೋಪ ಮಾಡಿದ್ದಾರೆ.

ನನ್ನನ್ನು ಹತ್ಯೆಗೈಯಲು ಯತ್ನಿಸುತ್ತಿರುವವರು ನನ್ನ ಮನೆಯ ಸ್ಥಳಾನ್ವೇಷಣೆ ಮಾಡಿದ್ದಾರೆ. ಹೀಗಾಗಿ ಪೊಲೀಸರು ಮನೆ ಬದಲಿಸುವಂತೆ ನನಗೆ ಸೂಚಿಸಿದ್ದಾರೆ. ಈ ಹಿಂದೆಯೂ ನನ್ನ ಹತ್ಯೆಗೆ ಯತ್ನಿಸಲಾಗಿತ್ತು’ ಎಂದು ಮಮತಾ ಸಂದ ರ್ಶನವೊಂದರಲ್ಲಿ ಹೇಳಿದ್ದಾರೆ. ಸಿಎಂ ಆಗುವುದಕ್ಕೂ ಮೊದಲು ಇದ್ದ ಹಳೆಯ ಮನೆಯಲ್ಲೇ ಮಮತಾ ಇದ್ದಾರೆ. 
 
ಸರ್ಕಾರಿ ಬಂಗ್ಲೆಗೆ ಮನೆ ಬದಲಿಸುವಂತೆ ಗುಪ್ತಚರ ಮೂಲಗಳು ಅವರಿಗೆ ಸಲಹೆ ನೀಡಿವೆ. ‘ಆದರೆ, ನಾನು ಸಾವಿಗೆ ಹೆದರುವುದಿಲ್ಲ. ನಾನು ಇಲ್ಲದ ಸಂದರ್ಭ ಸರ್ಕಾರ ಮತ್ತು ಪಕ್ಷವನ್ನು ಯಾರು ಮುನ್ನಡೆಸಬೇಕು ಎಂದು ನನ್ನ ಉಯಿಲಿನಲ್ಲಿ ತಿಳಿಸಿದ್ದೇನೆ’ ಎಂದಿದ್ದಾರೆ.

loader